ಮಡಿವಾಳ ಮಾಚಿದೇವ ಸಂಘಕ್ಕೆ ಆಯ್ಕೆ
ಮಾಗಡಿ: ಮಾಗಡಿ ತಾಲೂಕು ಮಡಿವಾಳ ಮಾಚಿದೇವ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಉಮೇಶ್ ಅವಿರೋಧವಾಗಿ ಆಯ್ಕೆಯಾದರು. ಕಾರ್ಯಾಧ್ಯಕ್ಷ ವೆಂಕಟರಾಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ. ಶ್ರೀನಿವಾಸ್, ಉಪಾಧ್ಯಕ್ಷ ಎಂ.ಟಿ. ಶಿವಣ್ಣ, ಖಜಾಂಚಿ ಪಿ.ರಾಜು, ಸಹ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿಯಾಗಿ ಮುನಿರಂಗಯ್ಯ, ಮಂಜುನಾಥ್, ಕುದೂರು ಮಂಜಣ್ಣ, ಸಿದ್ದಯ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ರತ್ನಮ್ಮ ಆಯ್ಕೆಯಾದರು.