ಮುನ್ತಿಝಾರ್ ಮೆಹದಿಗೆ ಪ್ರಶಸ್ತಿ
ದೊಡ್ಡಬಳ್ಳಾಪುರ: ಅಖಿಲ ಭಾರತ ಅಚೀವರ್ಸ್ ಫೌಂಡೇಶನ್ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಕ್ಕೆ ನೀಡುವ ಭಾರತೀಯ ನಾಯಕತ್ವ ಪ್ರಶಸ್ತಿಗೆ ಫೈವ್ಕಾಮ್ ಸಾಫ್ಟ್ಟೆಕ್ ಸಲ್ಯೂಷನ್ಸ್ ಪ್ರೈ.ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮುನ್ತಿಝಾರ್ ಮೆಹದಿ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಬಿಐ ಮಾಜಿ ನಿರ್ದೇಶಕ ಸರ್ದಾರ್ ಜೋಗಿಂದರ್ ಸಿಂಗ್, ಚುನಾವಣಾ ಆಯೋಗದ ಮಾಜಿ ಆಯುಕ್ತ ಡಾ.ಜಿ.ವಿ.ಜಿ.ಕೃಷ್ಣಮೂರ್ತಿ, ಮಾಜಿ ರಾಜ್ಯಪಾಲ ಭೀಷ್ಮ ನಾರಾಯಣ್ ಸಿಂಗ್, ಮಾಜಿ ಕೇಂದ್ರ ಸಚಿವ ಮಣಿ ಶಂಕರ್ ಅಯ್ಯರ್, ಮಾಜಿ ರಾಜ್ಯಪಾಲ ಓ.ಪಿ.ವರ್ಮಾ ಪ್ರಶಸ್ತಿ ವಿತರಣೆ ಮಾಡಿದರು.