ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಲಸ್ಟರ್ ಮಟ್ಟದ ಶಿಕ್ಷಕರ ಎರಡನೆ ಸಮಾಲೋಚನಾ ಸಭೆ

Rashmi Kasaragodu
Updated On : 1 Dec 2013, 1:46 am

ಮಾಗಡಿ: ಇಲ್ಲಿನ ಕುದೂರು ಭಾಗದ ಶ್ರೀಗಿರಿಪುರ, ಹುಲೀಕಲ್ , ಹುಳ್ಳೇನಹಳ್ಳಿ, ಚಿಕ್ಕಹಳ್ಳಿ ಕ್ಲಸ್ಟರ್  ಮಟ್ಟದ ಶಿಕ್ಷಕರ ಎರಡನೇ ಸಮಾಲೋಚನಾ ಸಭೆ ಹುಲೀಕಲ್ ಸಿ.ಆರ್.ಸಿ. ಕೇಂದ್ರದಲ್ಲಿ ನಡೆಯಿತು.
ಈ ಸಭೆಯಲ್ಲಿ ಶಾಲಾ ಶೈಕ್ಷಣಿಕ ಯೋಜನೆ, ಸಿ.ಸಿ.ಇ. ಗಣಿತ ಹಾಗೂ ವಿಜ್ಞಾನ ವಿಷಯಗಳ ಕ್ಲಿಷ್ಟತೆಗಳನ್ನು ಕುರಿತು ಸಮಾಲೋಚಿಸಲಾಯಿತು. ಬಿ.ಆರ್.ಪಿ ಗಳಾದ ಮಂಜುನಾಥ್, ನರಸಿಂಹಮೂರ್ತಿ ಪಾಲ್ಗೊಂಡು ಇಲಾಖೆಯ ಮಾಹಿತಿ ಹಾಗೂ ಕ್ಲಿಷ್ಟತೆಯ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ ಸುದೀರ್ಘವಾಗಿ ಚರ್ಚಿಸಲಾಯಿತು.
 ಈ ವೇಳೆ ಸಿ.ಆರ್.ಪಿ.ಗಳಾದ ಗಂಗರಾಜು, ಸಿದ್ದಯ್ಯ, ರಾಜಣ್ಣ, ನಾಗರಾಜು ಉಪಸ್ಥಿತರಿದ್ದು, ಉಸ್ತವಾರಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ರಘುಪತಿ, ಮಂಜುನಾಥ್ ವಿಷಯ ಕುರಿತು ವಿವರಿಸಿದರು.
ಮೀನು ಹಿಡಿಯಲು ಹೋದ ವ್ಯಕ್ತಿ ಜಾರಿ ಬಿದ್ದು ಸಾವು
ನೆಲಮಂಗಲ: ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹಳೇ ನಿಜಗಲ್ನಲ್ಲಿ ಶನಿವಾರ ಸಂಜೆ ನಡೆದಿದೆ. ಮೃತನನ್ನು ಪಟ್ಟಣದ ಅಡೇಪೇಟೆ ವಾಸಿ ಹುಲ್ಲೂರಯ್ಯ(50) ಎಂದು ಗುರುತಿಸಲಾಗಿದೆ.  ಈತ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಕಾಲು ಜಾರಿ ಬಿದ್ದ ಪರಿಣಾಮ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಘಟನೆ ಬಗ್ಗೆ  ತಿಳಿದ ಗ್ರಾಮಸ್ಥರು ಕೆರೆಯಿಂದ ಶವ ಹೊರತೆಗೆದಿದ್ದಾರೆ. ಈ ಬಗ್ಗೆ ದಾಬಸ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement