ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮತ್ತೆ ನುಸಿಪೀಡೆ ಹಾವಳಿ

Rashmi Kasaragodu
Updated On : 1 Dec 2013, 1:41 am

ರಾಮನಗರ: ತೆಂಗು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳ ಪೈಕಿ ಒಂದಾಗಿರುವ ರಾಮನಗರ ಜಿಲ್ಲೆಯಲ್ಲಿ ಮತ್ತೆ ನುಸಿಪೀಡೆ ಹಾವಳಿ ತಲೆದೋರಿದೆ. ರೋಗದ ಪ್ರಾರಂಭಿಕ ಸೂಚನೆಯಾಗಿ ಎಳೆಯ ಕಾಯಿಗಳಲ್ಲಿ ತೊಟ್ಟಿನ ಹತ್ತಿರ ತ್ರಿಕೋನಾಕಾರದ ತೆಳು ಹಳದಿ ಮಚ್ಚೆಗಳು ಕಂಡು ಬರುತ್ತವೆ. ಕ್ರಮೇಣ  ಕಂದು ಬಣ್ಣಕ್ಕೆ ತಿರುಗಿ ಕಾಯಿಯ ಮೇಲೆ ಬಿರುಕುಗಳು ಉಂಟಾಗುತ್ತವೆ.  ಅಲ್ಲಲ್ಲಿ ಅಂಟು ಸಹ ಹೊರಬರುತ್ತದೆ. ಕೆಲವು ಎಳೆ ಕಾಯಿಗಳ ತೊಟ್ಟು ಸಡಿಲಗೊಂಡು ಉದುರುತ್ತವೆ.
ರೋಗಪೀಡಿತ ತೋಟಗಳಲ್ಲಿ ಪ್ರತಿ ಮರಕ್ಕೆ ವರ್ಷಕ್ಕೆ 50 ಕೆಜಿ ಸಾವಯವ ಗೊಬ್ಬರ, 5 ಕೆಜಿ ಬೇವಿನ ಹಿಂಡಿ, 1 ಕೆಜಿ ಜಿಪ್ಸಮ್ ಮತ್ತು 50 ಗ್ರಾಂ ಬೋರ್ಯಾಕ್ಸ್ ಅನ್ನು ಕೊಡಬೇಕು. ಜತೆಗೆ 1 ಕೆಜಿ ಯೂರಿಯಾ, 2 ಕೆಜಿ ಸೂಪರ್ ಪಾಸ್ಫೇಟ್, 2 ಕೆಜಿ ಪೊಟ್ಯಾಷ್ ರಸಗೊಬ್ಬರಗಳನ್ನು ಎರಡು ಕಂತುಗಳಲ್ಲಿ ನೀಡಬೇಕು. ಇದರಿಂದ ಮರಗಳಲ್ಲಿ ನುಸಿ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
20 ಗ್ರಾಂ ಬೇವಿನ ಎಣ್ಣೆ, 20 ಗ್ರಾಂ ಬೆಳ್ಳುಳ್ಳಿ ರಸ, 5 ಗ್ರಾಂ ಸಾಬೂನನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಅಥವಾ ಶೇಕಡ 1 ರ ಅಜಾಡಿರ್ಯಾಕ್ಟಿನ್ ಅನ್ನು 1 ಲೀಟರ್ ನೀರಿನಲ್ಲಿ 4 ಗ್ರಾಂನಂತೆ ಬೆರೆಸಿ ಬಾಧೆಗೊಳಗಾದ ಮರಗಳಲ್ಲಿನ ಎಳೆ ಕಾಯಿಗಳಿಗೆ ವರ್ಷದಲ್ಲಿ 3 ಬಾರಿ ಸಿಂಪಡಿಸಬೇಕು. ಎತ್ತರದ ಮರಗಳಿಗೆ ಸಿಂಪರಣೆ ಕಷ್ಟವಾದ್ದರಿಂದ ಮಿಶ್ರಣವನ್ನು ಬೇರಿನ ಮೂಲಕ ನೀಡಬೇಕು.  
ಹಿರ್ಸುಟೆಲ್ಲಾ ಥಾಂಸೋನಿ ಶಿಲೀಂದ್ರ ಉತ್ಪನ್ನ (ಮೈಕೋಹಿಟ್) ಅನ್ನು 15 ದಿನಗಳ ಅಂತರದಲ್ಲಿ 3 ಬಾರಿ ಸಿಂಪಡಿಸಬೇಕು. ರಾಸಾಯನಿಕವಾದ ಡೈಕೋಫಾಲ್ 18 ಇಸಿ ದ್ರಾವಣವನ್ನು ಪ್ರತಿ ಲೀಟರ್ ನೀರಿನಲ್ಲಿ 4 ಗ್ರಾಂನಂತೆ ಅಥವಾ ಗಂಧಕ 80 ಡಬ್ಲ್ಯೂಪಿ ಅನ್ನು ಪ್ರತಿ ಲೀಟರ್ ನೀರಿನಲ್ಲಿ 5 ಗ್ರಾಂನಂತೆ ಮಿಶ್ರಣ ಮಾಡಿಕೊಂಡು ಎಳೆ ಕಾಯಿಗಳಿಗೆ ಸಿಂಪಡಣೆ ಮಾಡುವುದು ಸೂಕ್ತ ಎಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement