ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚುನಾವಣಾ ಕಾರ್ಯಕ್ಕೆ ವಾಹನ ನೀಡಿ: ಡಿಸಿ

Rashmi Kasaragodu
Updated On : 2 Apr 2014, 2:52 am

ರಾಮನಗರ: ಲೋಕಸಭಾ ಚುನಾವಣೆಯು ಏ.17ರಂದು ಒಂದೇ ಹಂತದಲ್ಲಿ ರಾಜ್ಯಾದ್ಯಂತ ನಡೆಯಲಿರುವುದರಿಂದ  ಚುನಾವಣಾ ಕಾರ್ಯಕ್ಕೆ ಸಾಕಷ್ಟು ವಾಹನಗಳ ಅವಶ್ಯಕತೆ ಇದೆ. 6-1 ರಿಂದ 12-1 ಆಸನ ಸಾಮರ್ಥ್ಯವುಳ್ಳ ಸಾರಿಗೆ ವಾಹನಗಳನ್ನು ಹೊಂದಿರುವ ಮಾಲೀಕರು ಚುನಾವಣಾ ಕಾರ್ಯಕ್ಕಾಗಿ ನೀಡುವ ಮೂಲಕ ಚುನಾವಣೆ ಸುಗಮವಾಗಿ ನಡೆಯಲು ನೆರವು ನೀಡುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಮಾಲೀಕರನ್ನು ಕೋರಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ ಉಪಯೋಗಿಸಿಕೊಳ್ಳುವ ವಾಹನಗಳಿಗೆ ಸರ್ಕಾರದ ನಿಯಮಾನುಸಾರ ಬಾಡಿಗೆಯನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.



ಎಪಿಆರ್‌ಒ ಸಿಬ್ಬಂದಿಗೆ ಮೊದಲ ಸುತ್ತಿನ ಚುನಾವಣೆ ತರಬೇತಿ
ಸೂಲಿಬೆಲೆ: ಮತಗಟ್ಟೆಗಳಲ್ಲಿ ಚುನಾವಣಿ ಕಾರ್ಯ ನಿರ್ವಹಿಸುವ ಪಿಆರ್‌ಓ ಹಾಗೂ ಎಪಿಆರ್‌ಓ ಸಿಬ್ಬಂದಿಗೆ ಮೊದಲ ಸುತ್ತಿನ ಚುನಾವಣಿ ತರಬೇತಿ ಕಾರ್ಯಗಾರ ಹೊಸಕೋಟೆಯಲ್ಲಿ ನಡೆದಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಲು ಎಲ್ಲ ರೀತಿಯಲ್ಲಿ ಸಿಬ್ಬಂದಿಗಳು ಸಶಕ್ತರಾಗಿರಬೇಕು ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ವಿ. ಶಂಕರ್ ಸೂಚಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊಸಕೋಟೆ ಕ್ಷೇತ್ರದಲ್ಲಿ ಇರುವ ಮತಗಟ್ಟೆಗಳಲ್ಲಿ  ಕಾರ್ಯನಿರ್ವಹಿಸಲಿರುವ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮತಗಟ್ಟೆಗಳಿಗೆ ತೆರಳುವ ಮುನ್ನ  ಅಧಿಕಾರಿಗಳು ಸ್ವಷ್ಟವಾಗಿ ಯಾವುದೇ ಗೊಂದಲಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಮತಗಟ್ಟೆಗಳಲ್ಲಿ  ಮುಕ್ತ, ನ್ಯಾಯ, ಪಾರದರ್ಶಕವಾಗಿ ಮತದಾನ ನಡೆಯುವಂತೆ ಕ್ರಮವಹಿಸಲು ತಿಳಿಸಿದರು. ಮತಯಂತ್ರಗಳ ಪ್ರಾಯೋಗಿಕ ಬಳಿಕೆ ಹಾಗೂ ಇವಿಎಂಎಸ್‌ಗಳನ್ನು ಮತಗಟ್ಟೆಗಳಲ್ಲಿ ಸಂರಕ್ಷಣೆ ಮಾಡುವ ಬಗ್ಗೆ ಕಾರ್ಯಗಾರದಲ್ಲಿ ನೀಡುವ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರು. ಉಮಾ ಮಹೇಶ್ವರ್ ಸಿಬ್ಬಂದಿಗೆ ತರಬೇತಿಯನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement