ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವೆಚ್ಚ ಪರಿವೀಕ್ಷಣೆ

Rashmi Kasaragodu
Updated On : 2 Apr 2014, 2:53 am

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಮಾಡಿರುವ ಚುನಾವಣಾ ವೆಚ್ಚ ಮಾಹಿತಿಗಳನ್ನು ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರು ರಾಮನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿವೀಕ್ಷಣೆ ನಡೆಸುವರು. ಮೊದಲ ಪರಿವೀಕ್ಷಣೆ ಏ.5ರಂದು, ಎರಡನೇ ಪರಿವೀಕ್ಷಣೆ ಏ.11ರಂದು ಮತ್ತು ಮೂರನೇ ಪರಿವೀಕ್ಷಣೆ ಏ.15ರಂದು ನಡೆಯಲಿದೆ. ಕ್ಷೇತ್ರದಿಂದ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಅಥವಾ ಅವರ ಅಧಿಕೃತ ಏಜೆಂಟರು ಈ ದಿನಗಳಂದು ನಿಗದಿತ ಸಮಯಕ್ಕೆ ಹಾಜರಾಗಿ ತಾವು ನಿರ್ವಹಿಸಿರುವ ವೆಚ್ಚದ (ಎ.ಬಿ.ಸಿ) ಮಾಹಿತಿಗಳನ್ನು ತಪ್ಪದೇ ಹಾಜರುಪಡಿಸುವಂತೆ ಕ್ಷೇತ್ರದ ಚುನಾವಣಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಸೂಚಿಸಿದ್ದಾರೆ. ಏ.5ರಂದು ಜೆಡಿಎಸ್‌ನ ಆರ್.ಪ್ರಭಾಕರ ರೆಡ್ಡಿ ಬೆಳಗ್ಗೆ 11ಕ್ಕೆ, ಸಿ.ತೋಪಯ್ಯ(ಬಿ.ಎಸ್.ಪಿ) ಬೆಳಗ್ಗೆ 11.30ಕ್ಕೆ, ಬಸವೇಗೌಡ (ಆರ್.ಪಿ.ಐ-ಎ) 11.45, ಕೆ.ಎ.ಮೋಹನ್ (ಕಾಮರಾಜರ್ ದೇಶೀಯ ಕಾಂಗ್ರೆಸ್) 11.55ಕ್ಕೆ, ರವಿಕೃಷ್ಣಾರೆಡ್ಡಿ (ಎ.ಎ.ಪಿ) ಮಧ್ಯಾಹ್ನ 12.05ಕ್ಕೆ, ಶಂಕರಪ್ಪ (ಜೈವಿಜಯ ಭಾರತೀ ಪಾರ್ಟಿ) 12.15ಕ್ಕೆ, ಪಕ್ಷೇತರರಾದ ಕೆಂಚಯ್ಯ 12.25ಕ್ಕೆ, ಜೆ.ನಟರಾಜು 12.35ಕ್ಕೆ, ಸುರೇಶ್ 12.45ಕ್ಕೆ, ಜೆ.ಟಿ.ಪ್ರಕಾಶ್ 12.55ಕ್ಕೆ, ಮಲ್ಲೇಶ 1.05ಕ್ಕೆ, ಎಂ.ಪಿ.ಮುನಾವರ್ ಷರೀಫ್ 1.15, ಡಿ.ಕೆ.ಸುರೇಶ್ (ಕಾಂಗ್ರೆಸ್) ಮಧ್ಯಾಹ್ನ 2.30ಕ್ಕೆ, ಮುನಿರಾಜುಗೌಡ (ಬಿಜೆಪಿ) 3.15ಕ್ಕೆ, ಸಿದ್ದರಾಮಯ್ಯ (ಪಕ್ಷೇತರ) ಮಧ್ಯಾಹ್ನ 4ಕ್ಕೆ ನಿಗದಿಗೊಳಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ವೆಚ್ಚ ವೀಕ್ಷಕರು ತಮ್ಮ ಹಂತದಲ್ಲಿ ನಿರ್ವಹಿಸಿರುವ ಅವಶ್ಯಕ ದಾಖಲೆಗಳೊಂದಿಗೆ ಈ ವೇಳೆ ತಪ್ಪದೇ ಹಾಜರಾಗಲು ಸಹ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement