ಬೆಳ್ಳಿ ಕಿರೀಟ, ವಜ್ರಾಂಗಿ ಅಲಂಕಾರ ಅರ್ಪಣೆ
ಮಾಗಡಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀರಂಗ ಸೇವಾ ಟ್ರಸ್ಟ್ ಬೆಳ್ಳಿ ಕಿರೀಟ, ವಜ್ರಾಂಗಿ ಅಲಂಕಾರವನ್ನು ದೇವರಿಗೆ ಅರ್ಪಿಸಲಾಯಿತು.
ಸುತ್ತಮುತ್ತಲ ಸಹಸ್ರಾರು ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.
ಆಯಗೋಲು: ತಿರುಮಲೆ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ರಥ ಸ್ಥಾಪನೆಗೆ ಆಯಗೋಲು ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು.
ಪಂಚಾಂಗ ಶ್ರವಣ: ವರ್ಷಾರಂಭ ಯುಗಾದಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ನೂತನ ಪಂಚಾಗವನ್ನು ಓದಲಾಯಿತು. ಇದೇ ವೇಳೆ ಉಭಯಮ್ಮನವರ ಸಮೇತ ಶ್ರೀರಂಗನಾಥಸ್ವಾಮಿ ದೇವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.