ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೆಚ್ಚ ವೀಕ್ಷಕರ ನೇಮಕ

Rashmi Kasaragodu
Updated On : 2 Apr 2014, 2:53 am

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಗೆ ವೆಚ್ಚ ವೀಕ್ಷಕರಾಗಿ ಕುಂದನ್ ಯಾದವ್ ಹಾಗೂ ಶ್ಯಾಮ್‌ರಾಜ್ ಪ್ರಸಾದ್ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿ ಆದೇಶಿಸಿದೆ.   ಕುಂದನ್ ಯಾದವ್ ಕ್ಷೇತ್ರ ವ್ಯಾಪ್ತಿಯ ಕುಣಿಗಲ್, ಮಾಗಡಿ, ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಹಾಗೂ ಶ್ಯಾಮ್‌ರಾಜ್ ಪ್ರಸಾದ್ ಆನೇಕಲ್, ಕನಕಪುರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವರು. ಕುಂದನ್ ಯಾದವ್ ರಾಮನಗರದ ಕಂದಾಯ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರತಿ ದಿನ ಬೆಳಗ್ಗೆ 10 ರಿಂದ 11ರವರೆಗೆ ಹಾಗೂ ಶ್ಯಾಮ್‌ರಾಜ್ ಪ್ರಸಾದ್ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯಲ್ಲಿನ ಸಹಾಯಕ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ಪ್ರತಿ ದಿನ ಬೆಳಗ್ಗೆ 10.30ರಿಂದ 11.30ರವರೆಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವರು.   ಕುಂದನ್ ಯಾದವ್ ಅವರ ಮೊ.9481279183, ಶ್ಯಾಮ್‌ರಾಜ್ ಪ್ರಸಾದ್ ಅವರ ಮೊ.9481283364 ಆಗಿರುತ್ತದೆ.
ವೆಚ್ಚ ವೀಕ್ಷಕರ ಸಂಪರ್ಕಾಧಿಕಾರಿಗಳು: ಕುಂದನ್ ಯಾದವ್ ಅವರ ಸಂಪರ್ಕಾಧಿಕಾರಿಯಾಗಿ ಗೋಪಾಲಗೌಡ, ಅವರ ಮೊ.7259005928. ಶ್ಯಾಮ್ ರಾಜ್‌ಪ್ರಸಾದ್ ಇವರ ಸಂಪರ್ಕಾಧಿಕಾರಿಯಾಗಿ ಅನಿಲ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದು, ಇವರ ಮೊ.9741580333 ಆಗಿದೆ. ಸಂಪರ್ಕಾಧಿಕಾರಿಗಳ ಮೂಲಕವೂ ವೆಚ್ಚ ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.
ಸಾಮಾನ್ಯ ವೀಕ್ಷಕರ ನೇಮಕ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಾಮಾನ್ಯ ವೀಕ್ಷಕರನ್ನಾಗಿ ಎಸ್.ಪ್ರಕಾಶ್ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿ ಆದೇಶಿಸಿದೆ.  ಪ್ರಕಾಶ್ ಅವರು ರಾಮನಗರದ ಕಂದಾಯ ಭವನದಲ್ಲಿರುವ ಚುನವಣಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 11ರಿಂದ 12ರವರೆಗೆ ಲಭ್ಯರಿರುತ್ತಾರೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ದೂರುಗಳನ್ನು ಈ ವೇಳೆಯಲ್ಲಿ ಖುದ್ದಾಗಿ ಅಥವಾ ಮೊ.9481275182, 9187153066 ಸಂಪರ್ಕಿಸಿ ಸಲ್ಲಿಸಬಹುದು.
ಸಂಪರ್ಕಾಧಿಕಾರಿ
ನೇಮಕ
ಸಾಮಾನ್ಯ ವೀಕ್ಷಕರ ಸಂಪರ್ಕಾಧಿಕಾರಿಯಾಗಿ ಕರ್ನಾಟಕ ಗೃಹ ಮಂಡಳಿಯ ರಾಮನಗರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಅವರನ್ನು ನೇಮಿಸಲಾಗಿದೆ. ಅವರ ಮೊ.9449035258 ಇವರ ಮೂಲಕವೂ ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement