ಶಾಲೆಗಳಿಂದ ಬೇಸಿಗೆ ತರಬೇತಿ ಶಿಬಿರ
ಕನಕಪುರ: ಪ್ರಾಥಮಿಕ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಪ್ರಾರಂಭವಾಗುತ್ತಿದ್ದಂತೆ ಕನಕಪುರ ತಾಲೂಕಿನ ಹಲವಾರು ಶಾಲೆಗಳು ಬೇಸಿಗೆ ಶಿಬಿರಗಳನ್ನು ಪ್ರಾರಂಭಿಸಿವೆ. ಕನಕಪುರದ ಅರ್ಕಾವತಿ ಸೇತುವೆ ಸಮೀಪದ ಮದರ್ ಥೆರೇಸಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಏ.11 ರಿಂದ ಮೇ 3ರ ವರೆಗೆ ನಡೆಯುವ ಬೇಸಿಗೆ ಶಿಬಿರದಲ್ಲಿ ಈಜು, ಷೂಟಿಂಗ್, ಹಾರ್ಸ್ ರೈಡಿಂಗ್, ಸತ್ಸಂಗ, ಶ್ಲೋಕ, ಚಿತ್ರಕಲೆ, ಪೈಂಟಿಂಗ್, ಸ್ಪೋಕನ್ ಇಂಗ್ಲೀಷ್, ಫುಟ್ಬಾಲ್ ಹಾಗೂ ಒಳಾಂಗಣ ಕ್ರೀಡೆಗಳ ತರಬೇತಿ ನೀಡಲಾಗುತ್ತಿದೆ. ವಿವರಗಳಿಗೆ ಮೊಬೈಲ್ - 9986164245 ಹಾಗೂ 9972366063 ಸಂಪರ್ಕಿಸಲು ಕೋರಿದೆ.
ಕನಕಪುರ ತಾಲೂಕು ಮೇಡಮಾರನಹಳ್ಳಿಯ ಗ್ರೀನ್‌ಬೈಲ್‌ಹೈ ಶಾಲೆಯಲ್ಲಿ ಏ.7 ರಿಂದ ಮೇ 10 ವರೆಗೆ ನಡೆಯುವ ಬೇಸಿಗೆ ಶಿಬಿರದಲ್ಲಿ ಆರ್ಟ್ ಅಂಡ್ ಕ್ರಾಫ್ಟ್, ಡ್ಯಾನ್ಸ್, ಹಾಡುಗಾರಿಕೆ, ಸ್ಪೋಕನ್ ಇಂಗ್ಲೀಷ್, ವಕ್ಯಾಬುಲರಿ ಎನ್ಹಾನ್ಸ್‌ಮೆಂಟ್, ಪದಬಂಧ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಥ್ರೋಬಾಲ್, ಕ್ರಿಕೆಟ್, ಚೆಸ್, ಟಿಟಿ, ಕೇರಂ ತರಬೇತಿ ನೀಡಲಾಗುತ್ತದೆ. ಕನಕಪುರದಿಂದ ವಾಹನ ಸೌಲಭ್ಯ ಏರ್ಪಡಿಸಿದೆ. ವಿವರಗಳಿಗೆ 988015 9473,9980415508 ಸಂಪರ್ಕಿಸಲು ಕೋರಿದೆ.
ಕನಕಪುರದ ಪೈಪ್‌ಲೈನ್ ರಸ್ತೆಯ ನ್ಯೂ ಇಂಡಿಯನ್ ಸ್ಕೂಲ್‌ನಲ್ಲಿ ಪೂರ್ವ ಆಫ್ರಿಕಾದ ಕಲಾವಿದೆ ಸಮೀನಾ ಸಾಚಕ್ ನೇತೃತ್ವದಲ್ಲಿ ಆಕ್ರಿಲಿಕ್ ಮತ್ತು ಆಯಿಲ್ ಪೈಂಟಿಂಗ್, ಸ್ಟೈನ್ ಗ್ಲ್ಲಾಸ್ ಪೈಂಟಿಂಗ್, ಆಫ್ರಿಕನ್ ಕ್ರಾಫ್ಟ್ ಮತ್ತು ಆರ್ಟ್, ಅಬಾಕಸ್, ಕ್ಯಾಲಿಗ್ರಫಿ ಹಾಗೂ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆಯೋಜಿಸಲಾಗಿದೆ. ಮಾಹಿತಿಗಾಗಿ 9845212969, 9036 959656 ಸಂಪರ್ಕಿಸಲು ಕೋರಿದೆ. ಕನಕಪುರ ತಾಲೂಕು ಚಿಕ್ಕಮುದವಾಡಿ ಗೇಟ್ ಸಮೀಪದ ಮ್ಯಾಗ್ನೋಲಿಯಾ ಪಬ್ಲಿಕ್ ಶಾಲೆಯಲ್ಲಿ ನಡೆಯಲಿರುವ ಬೇಸಿಗೆ ಶಿಬಿರದಲ್ಲಿ ನೃತ್ಯ, ಚಿತ್ರಕಲೆ, ಧ್ಯಾನ, ವನ್ಯಜೀವಿ ಛಾಯಾಚಿತ್ರಣ, ಕುಕ್ಕಿಂಗ್ ಗ್ಲಾಸ್,ಪೇಪರ್ ಆರ್ಟ್, ಮಾರ್ಷಲ್ ಆರ್ಟ್ಸ್, ಸರಳ ಇಂಗ್ಲೀಷ್, ಮ್ಯಾಥಮ್ಯಾಟಿಕಲ್ ಗೇಮ್ಸ್ ಕಲಿಸಲಾಗುತ್ತದೆ. ವಿವರಗಳಿಗೆ 9008428225, 9742147909 ಸಂಪರ್ಕಿಸಲು ಕೋರಿದೆ.
ಕನಕಪುರದ ಸೇಂಟ್ ಮೈಖೇಲ್ ಆಂಗ್ಲ ಶಾಲೆಯಲ್ಲಿ ಬೇಸಿಗೆ ನೃತ್ಯ ತರಬೇತಿ ಶಿಬಿರ ಏಪ್ರಿಲ್ 12ರಿಂದ ನಡೆಯಲಿದೆ. ಬೇಸಿಗೆ ನೃತ್ಯಶಿಬಿರದಲ್ಲಿ ಬೆಂಗಳೂರಿನ ನಾಟ್ಯಾಲಯ ಸಂಸ್ಥೆ, ರಿಫ್ಲೆಕ್ಷನ್ ಡ್ಯಾನ್ಸ್ ಶಾಲೆಯ ಭೂಷಣ್‌ಕುಮಾರ್, ಬೆಲ್ಲಿ ಡ್ಯಾನ್ಸರ್ ಪಾಯಲ್ ಗುಪ್ತಾ, ಮನುಮ್ಯಾಂಡಿ, ಸುಪ್ರೀತ್‌ಕುಮಾರ್,ರೂಬೆನ್ ಕುಮಾರ್, ತೇಜೋಥಾಮಸ್ ಹಾಗೂ ಪ್ರಶಾಂತ್ ಮೊದಲಾದವರು ತರಬೇತಿ ನೀಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊಬೈಲ್ - 98443 80018, 96634 84866 ಹಾಗೂ 97407 96209 ಸಂಪರ್ಕಿಸಲು ಕೋರಿದೆ. ಪೋಷಕರು ತಮ್ಮ ಮಕ್ಕಳಿಗೆ ಅಗತ್ಯವಾದ ತರಬೇತಿಯನ್ನು ರಜೆಯ ವೇಳೆಯಲ್ಲಿ ಮಕ್ಕಳಿಗೆ ನೀಡುವ ಮೂಲಕ ಬೇಸಿಗೆ ರಜೆಯನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಲು ಕೋರಿದೆ.