ಕ್ಲಬ್ಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿ
ರಾಮನಗರ: ಕೆಂಗೇರಿ ಉಪನಗರದ ಕ್ಲಬ್ಗೆ ಮಂಗಳವಾರ ರಾತ್ರಿ ನುಗ್ಗಿದ ಮುಸುಕುಧಾರಿಗಳ ದುಷ್ಕರ್ಮಿಗಳ ಗುಂಪು ರು.7.50 ಲಕ್ಷ ನಗದು ಮತ್ತು 260 ಗ್ರಾಂ ಚಿನ್ನಾಭರಗಳನ್ನು ದೋಚಿದ್ದು, ಕ್ಲಬ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿನ ಕೊಮ್ಮಘಟ್ಟ ರಸ್ತೆಯಲ್ಲಿರುವ ಸ್ಯಾಟಲೈಟ್ ಕ್ಲ್ಲಬ್ನಲ್ಲಿ ಈ ಘಟನೆ ನಡೆದಿದೆ. ದರೋಡೆಕೋರರ ಗುಂಪಿನಲ್ಲಿ 10 ರಿಂದ 12 ಮಂದಿ ಇದ್ದು, ಎಲ್ಲರೂ ಮುಸುಕುಧಾರಿಗಳಾಗಿದ್ದರು. ಕನ್ನಡದಲ್ಲೇ ಮಾತನಾಡುತ್ತಿದ್ದು ಎನ್ನಲಾಗಿದೆ. ರಾತ್ರಿ 11.30ರ ವೇಳೆ ಕ್ಲಬ್ಗೆ ನುಗ್ಗಿದ ದುಷ್ಕರ್ಮಿಗಳು ಇಸ್ಪೀಟ್ ಆಟದಲ್ಲಿ ತೊಡಗಿದ್ದವರನ್ನು ಬೆದರಿಸಿ, ಪಣಕಟ್ಟಿದ್ದ ಹಣ ಮಾತ್ರವಲ್ಲದೆ ಕಿಸೆಯಲ್ಲಿದ್ದ ನಗದು, ಮೈಮೇಲಿದ್ದ ಚೈನ್, ಬ್ರಾಸ್ಲೈಟ್, ಉಂಗುರಗಳನ್ನೂ ಕಿತ್ತುಕೊಂಡಿದ್ದಾರೆ. ದರೋಡೆಗೆ ಅಡ್ಡಿಪಡಿಸಿದ ಕ್ಲಬ್ ಕ್ಯಾಷಿಯರ್ ಪ್ರಭಾಕರ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಾಳು ಪ್ರಭಾಕರ್ ನೀಡಿರುವ ದೂರಿನ ಮೇರೆಗೆ ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದು ತಾರಾ, ಮಾಜಿ ಸಂಸದೆ ತೇಜಸ್ವಿನಿಗೌಡರಿಂದ ಪ್ರಚಾರ
ಚನ್ನಪಟ್ಟಣ: ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಪರ ಮಾಜಿ ಸಚಿವ ರಾಮಚಂದ್ರಗೌಡ, ವಿಧಾನಪರಿಷತ್ ಸದಸ್ಯೆ ತಾರಾ, ಮಾಜಿ ಸಂಸದೆ ತೇಜಸ್ವಿನಿಗೌಡ ಸೇರಿದಂತೆ ಪಕ್ಷದ ಪ್ರಮುಖರು ಏ.3 ರಂದು ತಾಲೂಕಿನಲ್ಲಿ ಚುನಾವಣಾ ಪ್ರಚಾರ ಕೈಗೊಳಿರುವುದಾಗಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗೌಡ ತಿಳಿಸಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಲಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.