ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ: ಪ್ರಮೀಳಾ ದರ್ಬಾರ್

Rashmi Kasaragodu
Updated On : 3 Apr 2014, 1:17 am

ಮತ್ತೀಕೆರೆ ಜಯರಾಮ್
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 7 ಕ್ಷೇತ್ರಗಳಲ್ಲಿ ಪುರುಷ ಮತದಾರರ  ಕೈ ಮೇಲು.. ಆದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಮಾತ್ರ ಮಹಿಳಾ ಸಾಮ್ರಾಜ್ಯ.
ಈ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,08,485 ಆಗಿದೆ. ಈ ಪೈಕಿ 1,06,414 ಮಹಿಳಾ ಮತದಾರರಿದ್ದಾರೆ. ಪುರುಷರು ಮತದಾರರು 1,02,066, ಇತರರು 5 ಮಂದಿ ಇಲ್ಲಿದ್ದಾರೆ.  
ಪುರುಷ ಮತದಾರರಿಗಿಂತ ಇಲ್ಲಿ 4354 ಮಹಿಳಾ ಮತದಾರರ ಅಧಿಕವಾಗಿದ್ದಾರೆ. ಕಳೆದೊಂದು ದಶಕದಿಂದಲೂ ಇಲ್ಲಿ ಮಹಿಳಾ ಮತದಾರರ ಮೇಲುಗೈ ಮುಂದುವರೆದುಕೊಂಡೇ ಬಂದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯ ಮತದಾರರ ಪೈಕಿ ಮಹಿಳೆಯರು ಪುರುಷರಿಗಿಂತ 3213 ಹೆಚ್ಚಿದ್ದರು. ಆಗ ಒಟ್ಟು ಮತದಾರರ ಸಂಖ್ಯೆ 1,98,752 ಆಗಿತ್ತು. ಮಹಿಳೆಯರು 1,00,980, ಪುರುಷರು 97,767 ಮತ್ತು ಇತರರು 5 ಮಂದಿಯಷ್ಟೇ ಇದ್ದರು.
ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆಯಿಂದ 2014ರ ಮತದಾರರ ಪಟ್ಟಿ ಪರಿಷ್ಕರಣೆ, ಪ್ರಸ್ತುತ ಮತದಾರರ ನೊಂದಣಿವರೆಗೆ ಇತರೆ ಮತದಾರರ ಪಟ್ಟಿಯಲ್ಲಿ ಒಂದಂಕಿಯೂ ಬದಲಾಗಿಯೇ ಇಲ್ಲ.  
ಹೀಗೆ, ಮಹಿಳಾ ಮತದಾರರು ಪ್ರಭುತ್ವ ಸಾಧಿಸಿರುವ ಚನ್ನಪಟ್ಟಣದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲ್ಲಲಾಗಲಿಲ್ಲ. ಇದುವರೆಗೆ, ಕ್ಷೇತ್ರವೂ ಒಮ್ಮೆಯೂ ಮಹಿಳೆ ಕೈ ಹಿಡಿದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement