ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶನಿಪ್ರಭಾವ ನಾಟಕ ಪ್ರದರ್ಶನ

Rashmi Kasaragodu
Updated On : 3 Apr 2014, 1:21 am

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ತುರುವನಹಳ್ಳಿ ಗ್ರಾಮದಲ್ಲಿ ಯುಗಾದಿ ಅಂಗವಾಗಿ ನಲ್ಲತಂಗಾ ದೇವಿಯ ಸತ್ಯ ಪರೀಕ್ಷೆ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಸ್ಥಳೀಯ ಕಲಾವಿದರೇ ಅಭಿನಯಿಸಿದ್ದ ನಾಟಕ ತನ್ನ ವಿಶೇಷ ವಸ್ತು ಮತ್ತು ಪರಿಕಲ್ಪನೆಯಿಂದ ಗಮನ ಸೆಳೆಯಿತು. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ನಾಟಕದ ಉದ್ಘಾಟನಾ ಸಮಾರಂಭ ಸರಳ ಮತ್ತು ಅರ್ಥಪೂರ್ಣವಾಗಿ ನಡೆಯಿತು. ಕಲಾವಿದರು ಮತ್ತು ಸ್ಥಳೀಯ ಕಲಾಸಕ್ತರೇ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲೂ ನಾಟಕ ಮತ್ತು ರಂಗ ಚಟುವಟಿಕೆಗಳು ಅಪರೂಪವಾಗುತ್ತಿರುವುದು ವಿಷಾದನೀಯ. ಹಳ್ಳಿಗಾಡಿನ ಮೂಲ ಸೊಗಡನ್ನು ಮರೆಯುವ ಹಂತ ತಲುಪಿರುವುದು ಆತಂಕಕಾರಿ. ಆದಾಗ್ಯೂ ಕೆಲ ಯುವ ಕಲಾವಿದರು ರಂಗ ಚಟುವಟಿಕೆಗಳ ಪೋಷಣೆಯಲ್ಲಿ ತೊಡಗುತ್ತಿರುವುದು ಗಣನೀಯ ಅಂಶ ಎಂದರು.
ಹಾಡೋನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಸಿ.ನಾಗರಾಜು ಸೇರಿದಂತೆ ಅನೇಕರು ಕಲಾವಿದರಾಗಿ ಪಾತ್ರ ನಿರ್ವಹಣೆ ಮಾಡಿದ್ದು ವಿಶೇಷವಾಗಿತ್ತು.


ಮಹಿಳಾ ಚಿಂತನ ವೇದಿಕೆ ಉದ್ಘಾಟನೆ ಇಂದು
ದೊಡ್ಡಬಳ್ಳಾಪುರ: ಕಮಲಾದೇವಿ ಚಟ್ಟೋಪಾಧ್ಯಾಯ ಮಹಿಳಾ ಚಿಂತನ ವೇದಿಕೆಯ ಪ್ರಾರಂಭೋತ್ಸವ ಕಾರ್ಯಕ್ರಮ ಏ.3ರ ಗುರುವಾರ ಬೆಳಗ್ಗೆ 11 ಗಂಟೆಗೆ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ನಡೆಯಲಿದೆ. ಲೇಖಕಿ ಡಾ.ಗೀತಾಶೆಣೈ ಕಮಲಾದೇವಿ ಅವರ ಸಾಧನೆ ಕುರಿತು ಮಾತನಾಡಲಿದ್ದಾರೆ.ಕರ್ನಾಟಕ ಲೇಖಕಿಯರ ಸಂಘದ ಮಾಜಿ ಕಾರ್ಯದರ್ಶಿ ಕೆ.ಎಂ.ವಿಜಯಲಕ್ಷ್ಮಿ ಮಹಿಳೆಯರಿಗೆ ಬೇಕು ಹೊಸ ಚಿಂತನ ಕ್ರಮ ಕುರಿತು ಮಾತನಾಡುವರು ಎಂದು ವೇದಿಕೆಯ ನೇತೃತ್ವ ವಹಿಸಿರುವ ಕೆ.ಎಸ್.ಪ್ರಭಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement