ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೋರಿಗೆ ಮಾರುತಿ ವ್ಯಾನ್ ಡಿಕ್ಕಿ: ಸಾವು

Rashmi Kasaragodu
Updated On : 3 Apr 2014, 1:19 am

ಮಾಗಡಿ: ಮಾರುತಿ ವ್ಯಾನ್ ಹೋರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಹೋರಿ ಮೃತಪಟ್ಟ ಘಟನೆ ತಿರುಮಲೆ ಹೆಬ್ಬಾಗಿಲ ಬಳಿ ಬುಧವಾರ ನಡೆದಿದೆ. ಕುಣಿಗಲ್ ತಾಲೂಕಿನ ಬಿಳಿದೇವಾಲಯ ಗ್ರಾಮದ ದೇವರಾಜು ಎಂಬುವರು ಇಲ್ಲಿನ ಶ್ರೀರಂಗನಾಥಸ್ವಾಮಿ ದನಗಳ ಜಾತ್ರೆಗೆ ಬಂದಿದ್ದರು. ಜೋಡಿ ಹೋರಿಗಳನ್ನು ಟೆಂಪೋದಿಂದ ಇಳಿಸುತ್ತಿದ್ದಾಗ ಆಕಸ್ಮಿಕವಾಗಿ  ಒಂದು ಹೋರಿ ರಸ್ತೆಗೆ ಜಿಗಿದಿದ್ದು, ಮಾಗಡಿಯಿಂದ ಬರುತ್ತಿದ್ದ ಮಾರುತಿ ವ್ಯಾನ್ ಹೋರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಹೋರಿಯೊಂದು ಸ್ಥಳದಲ್ಲೇ ಮೃತಪಟ್ಟಿದೆ. 1.5 ಲಕ್ಷ ರು ಮೌಲ್ಯದ ಹೋರಿ ಎಂದು ಅಂದಾಜಿಸಲಾಗಿದೆ. ಇದರಿಂದ ರೊಚ್ಚಿಗದ್ದ ರೈತರು ಮಾರುತಿ ವ್ಯಾನ್ ಮಾಲೀಕರನ್ನು ಹಿಡಿದು ಹಲ್ಲೆಗೆ ಯತ್ನಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆಆಗಮಿಸಿ ಆಗುವ ಅನಾಹುತ ತಪ್ಪಿಸಿದರು. ಹೋರಿ ಮಾಲೀಕ ದೇವರಾಜು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement