ಕೆ.ಎಚ್. ಮುನಿಯಪ್ಪ ದೊಡ್ಡ ಸುಳ್ಳುಗಾರ
ಮುಳಬಾಗಲು: ಕೋಲಾರ ಕ್ಷೇತ್ರಕ್ಕೆ ಸತತವಾಗಿ ಆರು ಬಾರಿ ಆಯ್ಕೆಯಾಗಿರುವ ಕೆ.ಎಚ್. ಮುನಿಯಪ್ಪನವರ ಕೊಡುಗೆ ಕೇವಲ ಸುಳ್ಳು ಹೇಳುವುದಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಕೇಶವ ಹೇಳಿದರು. ಸೋಸಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಜೆಡಿಎಸ್ ಅಲ್ಪಸಂಖ್ಯಾತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೆ.ಎಚ್.ಮುನಿಯಪ್ಪನವರು ತಮ್ಮ ಕುಟುಂಬದ ಸದಸ್ಯರಿಗೇ ಏನೂ ಮಾಡಿಲ್ಲ ಇನ್ನು ತನ್ನ ನಂಬಿದವರಿಗೆ ಏನುತಾನೇ ಮಾಡಿಯಾನು ಎಂದು ಛೇಡಿಸಿದರು. ಕೋಲಾರ ನಗರಸಭೆ ಅಧ್ಯಕ್ಷ ಮುಬಾರಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐನ ಮಹಮದ್ ಸಾಜೀದ್, ಮಹಮದ್ಸಿರಾಜ್, ಹೈದರಾಲಿಖಾನ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ, ಕೆ.ವಿ. ಶಂಕರಪ್ಪ ಸೇರಿ ಮತ್ತಿತರು ಇದ್ದರು.