ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಟೊಯೋಟ: ಮತ್ತೊಂದು ಬಿಕ್ಕಟ್ಟು

Rashmi Kasaragodu
Updated On : 4 Apr 2014, 2:26 am

ರಾಮನಗರ: ಬಿಡದಿಯ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಕಂಪನಿಯಲ್ಲಿ ವೇತನ ಹೆಚ್ಚಳ ಮತ್ತು ಬೇಡಿಕೆಗಳ ಈಡೇರಿಕೆ ಸಂಬಂಧ ತ್ರಿಪಕ್ಷೀಯ ಮಾತುಕತೆ ಫಲಪ್ರದಗೊಂಡು, ಆಡಳಿತ ಮಂಡಳಿಯು ಬೀಗಮುದ್ರೆ ನಿರ್ಧಾರದಿಂದ ಹಿಂದೆ ಸರಿದ ಬಳಿಕ ಮತ್ತೊಂದು ಬಿಕ್ಕಟ್ಟು ತಲೆದೋರಿದೆ.  ಹೋರಾಟಕ್ಕೆ ಧುಮುಕಿ, ಅಸಹಕಾರ ಮತ್ತು ಅಶಿಸ್ತು ಪ್ರದರ್ಶಿಸಿದ ಆರೋಪದ ಮೇಲೆ ಕಾರ್ಖಾನೆಯ 30ಕ್ಕೂ ಹೆಚ್ಚು ನೌಕರರನ್ನು ಆಡಳಿತ ಮಂಡಳಿ ಸೇವೆಯಿಂದ ಅಮಾನತುಪಡಿಸಿದೆ. ಇದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಯ ಪ್ರಮುಖರು ಕಾರ್ಖಾನೆ ಎದುರು ಬುಧವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ತ್ರಿಪಕ್ಷೀಯ ಮಾತುಕತೆಯಲ್ಲಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದ ಕಾರ್ಖಾನೆ ಆಡಳಿತ ಮಂಡಳಿಯು ಇದೀಗ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ. ಈ ಅಮಾನತು ಶಿಕ್ಷೆಯು ಪ್ರತೀಕಾರ ಕ್ರಮ ಮತ್ತು ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಹೋರಾಟನಿರತ ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.   ಕಾರ್ಖಾನೆಯಲ್ಲಿ ಕಾರ್ಮಿಕರನ್ನ ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಕಾರ್ಮಿಕರ ಹಿತವನ್ನು ಎರಡನೇ ಹಂತದ ಈ ಹೋರಾಟ ಪ್ರಾರಂಭಿಸಲಾಗಿದೆ. ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಶೀಘ್ರ ಮಧ್ಯೆ ಪ್ರವೇಶಿಸಿ ನಮಗೆ ನ್ಯಾಯ ಕೊಡಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾರ್ಮಿಕ ಮುಖಂಡರು ಎಚ್ಚರಿಸಿದ್ದಾರೆ.
6 ರಂದು ದತ್ತಿ ಪ್ರಶಸ್ತಿ ಪ್ರದಾನ
ಚನ್ನಪಟ್ಟಣ: ಇಲ್ಲಿನ ಸಿದ್ದನಹಳ್ಳಿ ಗ್ರಾಮದ ಬುದ್ಧಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಏ.6 ರಂದು ದತ್ತಿ ಪ್ರಶಸ್ತಿ ಪ್ರದಾನ, ಡಾ.ಕೂಡ್ಲೂರು ವೆಂಕಟಪ್ಪ ಆತ್ಮಹತ್ಯೆಯಲ್ಲ ಕೊಲೆ ಕಾದಂಬರಿ ಬಿಡುಗಡೆ ಹಾಗೂ ಯುಗಾದಿ ಕವಿ ಗೋಷ್ಟಿ ಕಾರ್ಯಕ್ರಮವನ್ನು ಇಲ್ಲಿನ ಬಾಲುಪಬ್ಲಿಕ್ ಶಾಲೆಯಲ್ಲಿ ಹಮ್ಮಿ ಕೊಂಡಿರುವುದಾಗಿ ಟ್ರಸ್ಟ್ನ ಅಧ್ಯಕ್ಷ ಎಸ್. ರಾಮಲಿಂಗೇಶ್ವರ (ಸಿಸಿರಾ) ತಿಳಿಸಿದ್ದಾರೆ. ಕಾರ್ಯಕ್ರಮವನ್ನು ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು  ಲಯನ್ ವೆಂಕಟಸುಬ್ಬಯ್ಯ ಚೆಟ್ಟಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾರದಾಮಾತಾ ಪ್ರಶಸ್ತಿಯನ್ನು ಪ್ರೇಮಾಮಂಜುನಾಥ್, ಲೋಹಿಯಾ ಪ್ರಶಸ್ತಿಯನ್ನು ಶಿವಾನಂದ ನಿಲಕಂಠನಹಳ್ಳಿ, ವಿವೇಕ ಪ್ರಶಸ್ತಿಯನ್ನು ಎಂ.ಆರ್. ಶಿವರಾಜುಗೆ ಪ್ರಾದಾನ ಮಾಡಲಾಗುವುದು. ಆತ್ಮಹತ್ಯೆಯಲ್ಲ ಕೊಲೆ ಕಾದಂಬರಿ ಕುರಿತು ಹಾಸನ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಉದಯರವಿ ಮಾತನಾಡಲಿದ್ದು, ಟ್ರಸ್ಟ್ನ ಅಧ್ಯಕ್ಷ ಎಸ್. ರಾಮಲಿಂಗೇಶ್ವರ್ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಗಳನ್ನಾಡಲಿದ್ದಾರೆ. ಕವಿಗೋಷ್ಠಿಯಲ್ಲಿ ವಿವಿಧ ಕವಿಗಳು ಕವನ ವಾಚನ ಮಾಡಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement