ಬಸವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಇಂದು
ನೆಲಮಂಗಲ: ಸೋಂಪುರ ಹೋಬಳಿ ನಿಡವಂದ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಏ.4ರ ಶುಕ್ರವಾರ ಮಧ್ಯಾಹ್ನ 12-45 ರಿಂದ 1-45 ರವರೆಗೆ ನಡೆಯಲಿದೆ ಹಾಗೂ ಅಂದು ರಾತ್ರಿ 9-30ಕ್ಕೆ ಜಾತ್ರಾ ವಿಶೇಷವಾಗಿ ಕುರುಕ್ಷೇತ್ರ ಅಥವಾ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಯಲಿದೆ ಎಂದು ಗ್ರಾ.ಪಂ.ಸದಸ್ಯ ಬಿ.ಕುಮಾರ್ ತಿಳಿಸಿದ್ದಾರೆ.
ಮತಯಂತ್ರಗಳ ವೀಕ್ಷಣೆ ಇಂದು
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತಯಂತ್ರಗಳ ಎರಡನೇ ಹಂತದ ರ್ಯಾಂಡಮೈಜೇಷನ್ ಕಾರ್ಯವು ಏ.4ರ ಮಧ್ಯಾಹ್ನ 12ಕ್ಕೆ ಜಿ.ಪಂ. ಭವನದಲ್ಲಿರುವ ಎನ್.ಐ.ಸಿ. ಕಚೇರಿಯಲ್ಲಿ ನಡೆಯಲಿದೆ. ಈ ವೇಳೆ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರು ಹಾಜರಾಗಲು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದ್ದಾರೆ.