ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಕ್ಕೆ ತನಿಖಾ ತಂಡ ಭೇಟಿ

Rashmi Kasaragodu
Updated On : 5 Apr 2014, 2:29 am

ಕೊರಟಗೆರೆ: ಕೊರಟಗೆರೆ ಪಟ್ಟಣದ ಕಾಳಿದಾಸ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಕ್ಕೆ ತುಮಕೂರು ಡಯಟ್ನ ಜಾಗೃತ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿತು.
ತಂಡದೊಂದಿಗೆ ಬಿಇಓ ಮಹೇಶ್ ಅವರು  ಮಾಹಿತಿ ನೀಡಿ ಕೊರಟಗೆರೆ ತಾಲೂಕಿನಲ್ಲಿ 12 ಪರೀಕ್ಷಾ ಕೇಂದ್ರಗಳಿದ್ದು ಇಲ್ಲಿಯವರೆಗೂ ಯಾವುದೇ ಅವ್ಯವಹಾರಗಳು ನಡೆದಿಲ್ಲ. ಎಲ್ಲಾ ಪರೀಕ್ಷಾ ಕೇಂದ್ರದ ಬಳಿ ಬಿಗಿ ಕಾವಲು ಹಾಕಲಾಗಿದೆ ಎಂದರು.
ಅದರಲ್ಲಿ 1 ಸೂಕ್ಷ್ಮ 1 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದ್ದು ತಾಲೂಕಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಹಾಗೂ ಅನುದಾನರಹಿತ ಖಾಸಗಿ 40 ಪ್ರೌಢಶಾಲೆಗಳಿಂದ 1198 ಗಂಡು, 1102 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2300 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿಯುತವಾಗಿ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಯಟ್ನ ಸುಜಾತ ಮತ್ತು ಗಂಗಾಧರ್ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಿದ ಕಾಳಿದಾಸ ಪ್ರೌಢಶಾಲೆಯ ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕಿ ಎಚ್.ಎಲ್. ಶಶಿಕಲಾ ಹಾಜರಿದ್ದರು.



ಇಂದು ವಿಚಾರ ಸಂಕಿರಣ
ತುಮಕೂರು: ತುಮಕೂರಿನ ಸಿದ್ಧಗಂಗಾ ಪದವಿ ಕಾಲೇಜು ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಉಪನ್ಯಾಸ, ಚರ್ಚಾಗೋಷ್ಠಿಯನ್ನು ಏ. 5 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಸಿದ್ಧಗಂಗಾ ಸಂಸ್ಥೆಯ ಗೌರವ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ತುಮಕೂರು ವಿವಿ ಪರೀಕ್ಷಾಂಗದ ವಿಶೇಷ ಕರ್ತವ್ಯಾಧಿಕಾರಿ ಡಾ.ಪಿ.ಎ. ಸುಚೇತನ್ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಪಿಪಾಲ್ ವಿ. ನಳಿನಾಕ್ಷಿ ವಹಿಸಲಿದ್ದಾರೆ.
ಪೂರ್ವಭಾವಿ ಸಭೆ
ತಿಪಟೂರು: ಶ್ರೀ ನಿರ್ಮಾಲಾನಂದನಾಥ ಸ್ವಾಮಿಗಳಿಗೆ ಗುರುವಂದನಾ ಕಾರ್ಯಕ್ರಮ ಹಾಗೂ ಸುಧಾಯಭವನದ ಭೋಜನಾಲಯ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಏ.6ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಸಂಘದ ಆವರಣದಲ್ಲಿ ಕರೆಯಾಲಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ  ಅಧ್ಯಕ್ಷ ಚಿದಾನಂದ್ ತಿಳಿಸಿದ್ದಾರೆ. ಆದ್ದರಿಂದ ಸಮಾಜ ಬಂಧುಗಳು ಈ ಸಭೆಗೆ ಹಾಜರಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ
ನಾಳೆ ಮಹರ್ಷಿ ಸ್ಟಡಿ ಸೆಂಟರ್ ಉದ್ಘಾಟನೆ
ತುಮಕೂರು: ತುಮಕೂರಿನ ಶಿವಕುಮಾರಸ್ವಾಮಿಗಳ ಸರ್ಕಲ್ನಲ್ಲಿರುವ ಗೋವಿಂದಪ್ಪ ಕಾಂಪ್ಲೆಕ್ಸ್ನಲ್ಲಿ ಏ. 6 ರಂದು ಸಂಜೆ 5-30 ಕ್ಕೆ ಮಹಿರ್ಷಿ ಸ್ಟಡಿ ಸೆಂಟರ್ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪತ್ರಿಕೋದ್ಯಮಿ ಎಸ್. ನಾಗಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಎಸ್ಪಿ ಆರ್. ಲಕ್ಷ್ಮಣ್,  ತುಮಕೂರು ಸಪ್ರಕಾ ಪ್ರಿನ್ಸಿಪಾಲ್ ಪ್ರೊ. ಚಿಕ್ಕಹನುಮಯ್ಯ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಸಿ.ಬಿ. ರಂಗಯ್ಯ, ಮುದ್ದೇನಹಳ್ಳಿ ನಂಜಯ್ಯ, ಬಿ. ಗಂಗಣ್ಣ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಎಸ್. ಸಿದ್ದಲಿಂಗಸ್ವಾಮಿ ವಹಿಸಲಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಬಿಎಸ್ಪಿ ಪ್ರಚಾರ
ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ತಾಲೂಕಿನಲ್ಲಿ ಚುನಾವಣಾ ಗ್ರಾಮಗಳಲ್ಲಿ ಶುಕ್ರವಾರ ಬಿರುಸಿನ  ಪ್ರಚಾರ ನಡೆಸಿದರು. ತಾಲೂಕಿನ ಬಲ್ಲೇನಹಳ್ಳಿ, ಕೂಡಲಕುಪ್ಪೆ ಮಾರ್ಗವಾಗಿ ಆಗಮಿಸಿದ ಅವರು ವಿವಿಧ ಗ್ರಾಮಗಳಲ್ಲಿ ಮತಯಾಚಿದರು. ಈ ಬಾರಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾದ ನನ್ನನ್ನು ಮತದಾರರು ಕೈಹಿಡಿಯಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಚ್.ಎನ್. ನರಸಿಂಹಮೂರ್ತಿ, ವಿ.ಸುರೇಶ್, ವಜ್ರಮುನಿ, ವೆಂಕಟೇಶ್ ಇದ್ದರು.
ಕಂಪ್ಯೂಟರ್ ಡಿಟಿಪಿ ತರಬೇತಿ 9ರಂದು
ಮಂಡ್ಯ: ಮೈಸೂರಿನ ರುಡ್ ಸೆಟ್ ಸಂಸ್ಥೆ  ವತಿಯಿಂದ 18 ರಿಂದ 45 ವರ್ಷ ವಯೋವುತಿಯಳ್ಳ ಆಸಕ್ತ ಪುರುಷರಿಗೆ ವಸತಿ ಸಹಿತವಾಗಿ 45 ದಿನಗಳ ಕಂಪ್ಯೂಟರ್ ಡಿಟಿಪಿ ತರಬೇತಿ ನಡೆಸಲು  ಏ.9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ಸಂಸ್ಥೆಯ ಆವರಣದಲ್ಲಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಮುಖ್ಯ ರಸ್ತೆ, ಹಿನಕಲ್. ಮೈಸೂರು ದೂ-0821-2519663, ಮೊ-9449860466 ಸಂಪರ್ಕಿಸಿ.
ಅಪರಿಚಿತ ವ್ಯಕ್ತಿ ನೇಣಿಗೆ ಶರಣು
ಪಾಂಡವಪುರ: ಪಟ್ಟಣದ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೇಣಿಗೆ ಶರಣಾಗಿರುವ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತ ವ್ಯಕ್ತಿಗೆ ಸುಮಾರು 35 ವರ್ಷ ವಯಸ್ಸಿರಬಹುದು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement