ಬಾಂಬೆ ರೆಯಾನ್ ಹೊರಗೀಲಿ: ಬೃಹತ್ ಪ್ರತಿಭಟನೆ ಇಂದು
ದೊಡ್ಡಬಳ್ಳಾಪುರ :ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೆಯಾನ್ಸ್ ಕಾರ್ಖಾನೆ ಹೊರಗೀಲಿ ಪ್ರತಿಭಟಿಸಿ ಕಾರ್ಮಿಕರು ನಡೆಸಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ.
ಕಳೆದ 20 ದಿನಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಆಡಳಿತ ವರ್ಗ ವಿರುದ್ಧ ಏ.5ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೊಡ್ಡಬಳ್ಳಾಪುರ ತಾಲೂಕಿನ ಕೈಗಾರಿಕಾ ಪ್ರದೇಶದ ಎಲ್ಲ ಕಾರ್ಮಿಕರು, ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಬಾಂಬೆ ರೆಯಾನ್ಸ್ ಕಾರ್ಖಾನೆಯ ಇತರ ಘಟಕಗಳ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕಾರ್ಮಿಕ ಸಂಘಟನೆಗೆ ಪ್ರಕಟಣೆ ತಿಳಿಸಿದೆ.
'ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ'
ಬಂಗಾರಪೇಟೆ: ಬಿಜೆಪಿ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿಯಲ್ಲಿ ಕೆಲಸಗಳು ನಡೆದಿವೆ. ಮತ್ತಷ್ಟು ಸುಧಾರಣೆಗಾಗಿ ಜನರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ತಾಲೂಕು ಘಟಕ ಅಧ್ಯಕ್ಷ ಮಾರ್ಕಂಡೇಗೌಡ ಮನವಿ ಮಾಡಿದರು. ಬಂಗಾರಪೇಟೆಯಲ್ಲಿ ಗುರುವಾರ ಸಂಜೆ ಬಿಜೆಪಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಮನೆ ಮನೆ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದಲ್ಲಿ ಮೊದಲ ಬಾರಿಗೆ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕರ ಪತ್ರಗಳನ್ನು ನೀಡಿ ಮತಯಾಚಿಸಿದರು. ಪಟ್ಟಣದ ಶಂತಿನಗರದ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಚಾರ ನಡೆಯಿತು. ಪುರಸಭೆ ಸದಸ್ಯ ಬಿ.ಸಿ.ಮೂರ್ತಿ, ರಮೇಶ್, ಜಿ.ನಾರಾಯಣಸ್ವಾಮಿ, ಪ್ರಭಾಕರ್ ಸೇರಿ ಇತರರು ಇದ್ದರು.