ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಸಹದೇವಪುರದ ತಿಮ್ಮರಾಯಸ್ವಾಮಿ ಜಾತ್ರೆ

Rashmi Kasaragodu
Updated On : 6 Apr 2014, 1:45 am

ಆನೇಕಲ್ಲು:  ಇಲ್ಲಿನ ಪುರಾತನ ದೇಗುಲ ಉದ್ಭವಮೂರ್ತಿ ಸಹದೇವಪುರದ ತಿಮ್ಮರಾಯಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಮಧ್ಯಾಹ್ನ 12 ಗಂಟೆಗೆ ಅಭಿಜನ್ಮುಹೂರ್ತದಲ್ಲಿ ನಡೆಯಲಿದೆ ಎಂದು ಪ್ರಧಾನ ಅರ್ಚಕ ರಾಮಚಂದ್ರ ಭಟ್ಟ ತಿಳಿಸಿದ್ದಾರೆ. ಬೆಳಗ್ಗೆ ಸುಪ್ರಭಾತ ಸೇವೆ, ವಿಶೇಷ ಅಲಂಕಾರ, ಹೋಮ, ನಂತರ ಉತ್ಸವ ಮೂರ್ತಿಯ ರಥಾರೋಹಣ ನಡೆಯಲಿದೆ. ಬಲಿಹರಣ ನಂತರ ತೆಪ್ಪೋತ್ಸವ ನಡೆಯಲಿದೆ. ರಾತ್ರಿ ಕರಗ ಮಹೋತ್ಸವ, ಪೌರಾಣಿಕ ನಾಟಕ ಏರ್ಪಡಿಸಲಾಗಿದೆ ಎಂದು ದೇಗುಲ ಸಮಿತಿಯವರು ತಿಳಿಸಿದ್ದಾರೆ.
ಕಲ್ಲು ಗಾಲಿ ರಥ: ರಥವು 7 ಅಂಕಣಗಳನ್ನು ಹೊಂದಿದ್ದು, ಕಲ್ಲು ಗಾಲಿ ರಥವು ಆಕರ್ಷಣೆಯಾಗಿದೆ. ರಥೋತ್ಸವ ದೇಗುಲ ಪ್ರದಕ್ಷಿಣೆ ಮಾಡಿ ಯಥಾ ಸ್ಥಾನ ನಿಲ್ಲಲು ಸಂಜೆಯಾಗುತ್ತದೆ. ಸುತ್ತ ಮುತ್ತಲ ಗ್ರಾಮಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement