ಕಾವೇರಿದ ಚುನಾವಣಾ ಪ್ರಚಾರ:ಹಾವಳಿ ಹೆಚ್ಚಿಸಿದ ಮೈಕಾಸುರ
ರಾಮನಗರ: ಬೇಸಿಗೆ ಬಿಸಿಲ ಝಳದ ನಡುವೆ ಎಲ್ಲೆಡೆ ಲೋಕಸಭೆ ಚುನಾವಣೆ ಪ್ರಚಾರ ಕಾವೇರಿದೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಆಟೋಗಳಲ್ಲಿ ಮೈಕ್ ಕಟ್ಟಿಕೊಂಡು, ಬಣ್ಣ ಬಣ್ಣದ ಮಾತುಗಳ ವರ್ಣನೆಯೊಂದಿಗೆ ನಡೆಸಲಾಗುತ್ತಿದೆ.
ಅಭ್ಯರ್ಥಿ ಇಲ್ಲವೇ ಮುಖಂಡರು ಭೇಟಿ ನೀಡುವ ಕುರಿತು ಒಂದೆರಡು ದಿನ ಮುಂಚೆ, ಕೆಲವೇ ಗಂಟೆಗಳಲ್ಲಿ ಆಗಮನ, ಕೆಲವೇ ನಿಮಿಷಗಳಲ್ಲಿ ಆಗಮನ ಎನ್ನುವ ಸುದ್ದಿಯನ್ನು ಜನತೆಗೆ ಮುಟ್ಟಿಸುವುದಕ್ಕಾಗಿ ಧ್ವನಿವರ್ಧಕಗಳಲ್ಲಿ ಕಿವಿಗಡಚ್ಚುಕ್ಕವಂತೆ ಅಬ್ಬರಿಸಲಾಗುತ್ತಿದೆ. ಅನೌನ್ಸರ್ಗಳಿಗೆ ಈ ಚುನಾವಣೆಯಿಂದ ಒಂದಿಷ್ಟು ಸಂಪಾದನೆಯ ಲಾಭವಾಗುತ್ತಿದೆ. ಇನ್ನು ಕೆಲವರ ಪ್ರಚಾರ ತೀರಾ ವಿಚಿತ್ರವಾಗಿದ್ದು, ಸಿನೆಮಾ ಹಾಡುಗಳಿಗೆ ಅಭ್ಯರ್ಥಿ ಹೆಸರನ್ನು ಸೇರಿಸಿಕೊಂಡು ಹಾಡುತ್ತಾ ಇಲ್ಲವೇ ಕ್ಯಾಸೆಟಟ್ಹಾಕಿಕೊಂಡು ಆಟೋಗಳು ಅಲ್ಲಲ್ಲಿ ಸಾಗುತ್ತಿವೆ.