ಜಗಜೀವನ್ ಜನ್ಮದಿನಕ್ಕೆಈ ಬಾರಿಯೂ ಸಂಹಿತೆ ಕಾಟ
ರಾಮನಗರ: ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಗೆ ಈ ವರ್ಷವೂ ಚುನಾವಣಾ ನೀತಿ ಸಂಹಿತೆ ಕಾಟ ಎದುರಾಯಿತು. ಈ ಹಿನ್ನೆಲೆಯಲ್ಲಿ ಜಯಂತಿ ಕಾರ್ಯಕ್ರಮ ಸರಳವಾಗಷ್ಟೆ ನೆರವೇರಿತು.
ಕಳೆದ ವರ್ಷ ವಿಧಾನಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಸಾಂಕೇತಿಕವಾಗಿ ನಡೆದಿತ್ತು. ಈ ಬಾರಿ 107ನೇ ಜನ್ಮ ದಿನಾಚರಣೆಯ ಅದ್ಧೂರಿ ಆಚರಣೆಗೆ ಲೋಕಸಭೆ ಚುನಾವಣೆ ಅಡ್ಡಿಯಾಗಿದೆ.
ನಗರದ ಕಂದಾಯ ಭವನ ಆವರಣದಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಪುಷ್ಪಾರ್ಚನೆ ನೆರವೇರಿಸಿ, ಗೌರವ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಇದ್ದರು.