ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ; ವ್ಯಕ್ತಿ ಬಂಧನ

Rashmi Kasaragodu
Updated On : 6 Apr 2014, 1:48 am

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಅನಂತ್ಕುಮಾರ್ (39) ಎಂಬಾತನನ್ನು ಬಂಧಿಸಿ 23 ಸಾವಿರ ನಗದು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಬಿಇಎಂಎಲ್ ಬಡಾವಣೆ ಮನೆಯೊಂದರಲ್ಲಿ ಶುಕ್ರವಾರ ನಡೆದ ಭಾರತ ಮತ್ತು ದ.ಆಫ್ರಿಕಾ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸಲಾಗುತ್ತಿತ್ತು.
ಸೀಮೆ ಎಣ್ಣೆ ವಶ: ಪಡಿತರ ಚೀಟಿದಾರರಿಗೆ ವಿತರಣೆಯಾಗಬೇಕಿದ್ದ ನೀಲಿ ಸೀಮೆ ಎಣ್ಣೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೆದ್ದಲಹಳ್ಳಿ ನಿವಾಸಿ ಸೀತಾರಾಮು (70) ಬಂಧಿತ ವ್ಯಕ್ತಿ. ಈತನಿಂದ 40 ಸಾವಿರ ಬೆಲೆಬಾಳುವ 2 ಬ್ಯಾರಲ್ ಸೀಮೆ ಎಣ್ಣೆ ವಶಪಡಿಸಿಕೊಳ್ಳಲಾಗಿದೆ.  ನ್ಯಾಯಬೆಲೆ ಅಂಗಡಿ ಹೊಂದಿರುವ ಸಿದ್ದಪ್ಪ ಎಂಬಾತನಿಂದ ಸೀಮೆ ಎಣ್ಣೆ ಖರೀದಿಸುತ್ತಿದ್ದ ಸೀತರಾಮು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ. ಪಡಿತರ ಸೀಮೆಎಣ್ಣೆ ಅಕ್ರಮ ಮಾರಾಟ ಮಾಡುತ್ತಿದ್ದ ಸಿದ್ದಪ್ಪ ತಲೆಮರೆಸಿಕೊಂಡಿದ್ದಾನೆ.


ಬ್ಲಾಕ್ಮೇಲ್; ನಾಲ್ವರ ಸೆರೆ
ಬೆಂಗಳೂರು:  ಕಳ್ಳತನ ಮಾಡಿ ಮಹಿಳೆಯರನ್ನ ವಿವಸ್ತ್ರಗೊಳಿಸಿ ವೀಡಿಯೋ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದರೆ ಫೇಸ್ಬುಕ್ ಹಾಗೂ ಅಂತರ್ಜಾಲಕ್ಕೆ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ ನಾಲ್ವರು ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ. ಹಳ್ಳಿ ನಿವಾಸಿ ಸೈಯ್ಯದ್ ತನ್ವೀರ್ (28), ಆರ್.ಟಿ. ನಗರ ನಿವಾಸಿ ಅಬ್ದುಲ್ ಮತೀನ್ (23), ಭಾರತಿ ನಗರ ನಿವಾಸಿ ಚಾಂದ್ ಅತೀನ್ (30) ಹಾಗೂ ಭುವನೇಶ್ವರಿ ನಗರ ನಿವಾಸಿ ಸೈಯದ್ ವಸೀಂ (21) ಬಂಧಿತರು. ಆರೋಪಿಗಳಿಂದ 1.1 ಲಕ್ಷ ಚಿನ್ನಾಭರಣ, 45 ಸಾವಿರ ನಗದು, 2 ದ್ವಿಚಕ್ರ ವಾಹನಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎಚ್ಬಿಆರ್ ಬಡಾವಣೆ ಬ್ಯೂಟಿ ಪಾರ್ಲರ್ಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಅವರಿಂದ ಚಿನ್ನಾಭರಣ ದೋಚಿ, ವಿವಸ್ತ್ರಗೊಳಿಸಿ ವಿಡಿಯೋ ಮಾಡಿಕೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement