ಬೆಳೆ ಹಾನಿ: ರೈತ ಆತ್ಮಹತ್ಯೆ
ಚಡಚಣ: ಈಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಗೀಡಾಗಿದ್ದರಿಂದ ಮನನೊಂದು ಹತ್ತಳ್ಳಿ ಗ್ರಾಮದ ರೈತರೊಬ್ಬರು ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಚಂದ್ರ ಶಿವರಾಯ ಬಿರಾದಾರ(48) ಆತ್ಮಹತ್ಯೆಗೆ ಶರಣಾದವರು. ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದ 4.10 ಎಕರೆ ಕಬ್ಬು ಬೆಳೆ ನಾಶವಾಗಿತ್ತು. ಬೆಳೆ ನಾಶವಾದ್ದರಿಂದ ಸಾಲಕ್ಕೆ ಹೆದರಿ ಹೊಲದಲ್ಲಿ ವಿಷ ಸೇವಿಸಿ ಕೊನೆಯುಸಿರೆಳೆದಿದ್ದಾರೆ.