ರಂಗತಂಡಗಳ ವತಿಯಿಂದ 15 ರಿಂದ ಬೇಸಿಗೆ ಶಿಬಿರ
ಕನಕಪುರ: ಕನಕಪುರ ಮಾಯ್ಕಾರ ರಂಗತಂಡ, ಅಕ್ಷರ ಧಮ್ಮ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಸಂಯುಕ್ತ ಆಶ್ರಯದಲ್ಲಿ 20 ದಿನಗಳ ಬೇಸಿಗೆ ಶಿಬಿರವನ್ನು ಏ.15 ರಿಂದ ಮೇ.4 ರ ವರೆಗೆ ರಾಮನಗರ ಸಮೀಪದ ಜಾನಪದ ಲೋಕದಲ್ಲಿ ನಡೆಯಲಿದೆ. ಮಕ್ಕಳ ಮನೋವಿಕಾಸ, ಗ್ರಹಿಕೆಗಳನ್ನು ಉತ್ತೇಜಿಸುವ, ನುರಿತ ಕಲಾವಿದರಿಂದ ತರಬೇತಿ ಒದಗಿಸುವ ಈ ಶಿಬಿರದಲ್ಲಿ ವಾರಾಂತ್ಯಗಳಲ್ಲಿ ಪೋಷಕರೂ ಮಕ್ಕಳೊಂದಿಗೆ ಪಾಲ್ಗೊಳ್ಳುವ ಅವಕಾಶವಿದೆ ಎಂದು ನಿರ್ದೇಶಕ ನರೇಶ್ಮಯ್ಯ ಹೇಳಿದ್ದಾರೆ. ನಟ ಅರುಣ್ಸಾಗರ್, ಪಾಪಪಾಂಡು ಜಹಾಂಗೀರ್,ಹಿರಿಯ ಕಲಾವಿದೆ ಫಣಿಯಮ್ಮ, ನೀನಾಸಂ ಕಲಾವಿದರಾದ ಎಂ.ಸಿ.ನಾಗರಾಜು, ನರೇಶ್ಮಯ್ಯ,ರತ್ನ ಸಕಲೇಶಪುರ ಹಾಗೂ ಮಂಜುಳಾಮಯ್ಯ ತರಬೇತಿ ನೀಡಲಿದ್ದಾರೆ. ವಿವರಕ್ಕೆ, ದೂ. 94804-57336, 98861-29222.