ವಾರ್ಡನ್ನಿಂದ ಅತ್ಯಾಚಾರ: ವಿದ್ಯಾರ್ಥಿನಿ ಗರ್ಭಿಣಿ
ಮಾಗಡಿ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಮೇಲೆ ಹಾಸ್ಟೆಲ್ ವಾರ್ಡನ್ ಅತ್ಯಾಚಾರ ನಡೆಸಿದ್ದು, ವಿದ್ಯಾರ್ಥಿನಿ ಈಗ 8 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ಆರೋಪಿಸಿ ವಸತಿ ಶಾಲೆಯ ಪ್ರಾಂಶುಪಾಲರೇ ದೂರು ನೀಡಿದ್ದಾರೆ. ಪಟ್ಟಣದ ಹೊಸಪೇಟೆ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವಾರ್ಡನ್ ಯಾಖೂಬ್ ಖಾನ್ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೈಹಿಕ ಶಿಕ್ಷಕ ಖಾನ್ ಪ್ರಭಾರಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಖಿನ್ನತೆಗೆ ಒಳಗಾಗಿದ್ದ ಮಗಳನ್ನು ತಾಯಿ ವಿಚಾರಿಸಿದಾಗಲೇ ಆಕೆ ಗರ್ಭಿಣಿಯಾಗಿರುವ ವಿಷಯ ಬಯಲಾಗಿದೆ. ಮಗಳೊಂದಿಗೆ ಪ್ರಾಂಶುಪಾಲರನ್ನು ಭೇಟಿ ಮಾಡಿ ವಿಷಯ ತಿಳಿಸಿದರು. ನಂತರ ಪ್ರಾಂಶಪಾತರಾದ ವಿ.ಲೀಲಾ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.