ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೀತಾಳೆ ಸಿಡುಬು: ಜಾಗೃತಿ ಅಗತ್ಯ

Rashmi Kasaragodu
Updated On : 6 Apr 2014, 1:53 am

ರಾಮನಗರ: ಜಿಲ್ಲೆಯಲ್ಲಿ ಸೀತಾಳೆ ಸಿಡುಬು(ಚಿಕನ್ ಫಾಕ್ಸ್) ಕಣಿಸಿಕೊಂಡಿದೆ. ಸೀತಾಳೆ ಸಿಡುಬು ತೀವ್ರ ಸ್ವರೂಪದ ಸೋಂಕು ರೋಗವಾಗಿದ್ದು, ವೆರಿಸೆಲ್ಲ-ಜಾಸ್ಟರ್ ಎಂಬ ವೈರಸ್ನಿಂದ ಉಂಟಾಗುತ್ತದೆ. ಈ ಸೋಂಕು ಕೆಮ್ಮುವಾಗ, ಸೀನುವಾಗ ಉಸಿರಿನಿಂದ ಮತ್ತೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ.
ಸೋಂಕಿನ ಮೂಲ: ಸಾಮಾನ್ಯವಾಗಿ ಸೋಂಕಿರುವ ವ್ಯಕ್ತಿಯ ಗಂಟಲು ಮತ್ತು ಬಾಯಿಯಲ್ಲಿ ಇರುವ ದ್ರವದಲ್ಲಿ ಮತ್ತು ಚರ್ಮದ ಬೊಕ್ಕೆಗಳಲ್ಲಿರುವ ದ್ರವಗಳಲ್ಲಿ ವೈರಾಣುಗಳಿರುತ್ತವೆ. ದೇಹದಲ್ಲಿ
ಅನುಕೂಲ ಸ್ಥಿತಿ ಕಲ್ಪಿಸಿಕೊಂಡು ರೋಗಾಣುಗಳು ಬೆಳೆಯುವುದಕ್ಕೆ 2 ರಿಂದ 3 ವಾರಗಳ ಕಾಲ ಬೇಕಿರುತ್ತದೆ. ಗುಳ್ಳೆಗಳು ಕಂಡುಬರುವುದಕ್ಕೆ ಕೆಲ ದಿನ ಮುಂಚಿತವಾಗಿ ಹಾಗೂ ಗುಳ್ಳೆಗಳು ಮಾಯುವವರೆಗೆ ಈ ಸೋಂಕು ಹರಡುತ್ತದೆ. ಚಿಕನ್ಫಾಕ್ಸ್ ಸಾಮಾನ್ಯವಾಗಿ ವರ್ಷದ ಮೊದಲ 6 ತಿಂಗಳಲ್ಲಿ 10 ವರ್ಷದ ಕೆಳಗಿನ ಮಕ್ಕಳಲ್ಲಿ ಕಂಡುಬರುತ್ತದೆ. ಅತಿಯಾದ ಜನಸಂದಣಿ ರೋಗ ಪ್ರಸರಣಕ್ಕೆ ಕಾರಣವಾಗಿರುತ್ತದೆ. ಬಾಲ್ಯಾವಸ್ಥೆಯ ರೋಗವಾಗಿದ್ದರೂ ಸಹ ಸೀತಾಳೆ ಸಿಡುಬು ಪ್ರಾಯದವರು ಮತ್ತು ವಯಸ್ಕರಿಗೂ ಬರಬಹುದು. ಗರ್ಭಿಣಿಯರಲ್ಲಿ ಸೀತಾಳೆ ಸಿಡುಬು ಅಪಾಯಕಾರಿ. ಭ್ರೂಣಕ್ಕೆ ಮತ್ತು ನವಜಾತ ಶಿಶುಗಳಿಗೆ ಗಂಡಾಂತರವಾಗುತ್ತದೆ.
ರೋಗದ ಚಿಹ್ನೆಗಳು: ಇದ್ದಕ್ಕಿದ್ದಂತೆ ಸಾಧಾರಣದಿಂದ ತೀವ್ರ ತರದ ಜ್ವರ, ಬಳಲಿಕೆ, ನಡುಕ, ಹೊಟ್ಟೆ ಉರಿ, ವಾಂತಿ, ಮೈಮೇಲೆ ಕೆಂಪು ದದ್ದುಗಳು, ಚಿಕನ್ಫಾಕ್ಸ್ ಸ್ವಭಾವಗುಣವಾಗಿ ನವೆ, ಉರಿಯುಳ್ಳ ಗುಳ್ಳೆಗಳು ಮೈಮೇಲೆ ಪ್ರಾರಂಭವಾಗಿ ಮುಖ, ತಲೆ, ಬಾಯಿ, ಕಿವಿ, ಕೈಕಾಲುಗಳಿಗೆ ಹರಡುತ್ತದೆ.
ದುಷ್ಪರಿಣಾಮಗಳು: ಚರ್ಮದ ಬ್ಯಾಕ್ಟೀರಿಯಾ ಸಂಬಂಧಿತ ಸೋಂಕು, ನ್ಯುಮೋನಿಯಾ, ಸರ್ಪ ಸುತ್ತು, ಗರ್ಭಪಾತ, ಮುಖದಲ್ಲಿ ಬೊಕ್ಕೆಯ ಗುರುತುಗಳಿಂದ ದೀರ್ಘಾವಧಿಯ ಪರಿಣಾಮ ಬೀರಬಹುದು. ಎಲ್ಲಾ ಪ್ರಕರಣಗಳಲ್ಲಿ ಚಿಕನ್ಫಾಕ್ಸ್ ಸಾಧಾರಣ ಸ್ವರೂಪದ್ದಾಗಿದ್ದು, ಸ್ವಯಂ ನಿಯಂತ್ರಣಕ್ಕೆ ಒಳಪಡುವ ರೋಗವಾಗಿರುತ್ತದೆ. ಯಾವುದೇ ನಿಗದಿತ ಚಿಕಿತ್ಸೆ ಇರುವುದಿಲ್ಲ. ಶೇ.1ಕ್ಕಿಂತ ಕಡಿಮೆ ಮಾರಣಾಂತಿಕವಾಗಿದೆ.


ತಡೆಗಟ್ಟುವಿಕೆ ಕ್ರಮಗಳು
ಟಿ ಸೋಂಕು ತಗುಲಿದ ವ್ಯಕ್ತಿಯನ್ನು ಬೊಕ್ಕೆಗಳು ಕಾಣಿಸಿಕೊಂಡ ಕ್ಷಣದಿಂದ ಅವುಗಳು ಒಣಗುವವರೆಗೂ ಪ್ರತ್ಯೇಕಿಸುವುದು.
ಟಿ ಸೋಂಕು ತಗುಲಿದ ವ್ಯಕ್ತಿಯು ಬೇರೆ ಊರುಗಳಿಗೆ ಪ್ರಯಾಣಿಸದಿರುವುದು.
ಟಿ ಸೀತಾಳೆ ಸಿಡುಬಿನ ರೋಗದ ಬಗ್ಗೆ ಪ್ರಕಟಿಸುವುದು.
ಟಿ ಗಂಟಲು ಮತ್ತು ಮೂಗಿನಿಂದ ಹೊರಸೂಸಿದ ದ್ರವದಿಂದ ಕಲುಷಿತಗೊಂಡ ವಸ್ತು, ಪದಾರ್ಥಗಳಲ್ಲಿರುವ ರೋಗಾಣುಗಳನ್ನು ನಾಶಪಡಿಸುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement