ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚುನಾವಣಾಧಿಕಾರಿಗಳಿಂದಲೂ ಗ್ರಾಮ ವಾಸ್ತವ್ಯ...

Rashmi Kasaragodu
Updated On : 7 Apr 2014, 1:42 am

ಸೂಲಿಬೆಲೆ: ಗ್ರಾಮದ ಸಮಸ್ಯೆಗಳನ್ನು ಅರಿಯಲು ರಾಜಕಾರಣಗಳು ಗ್ರಾಮವಾಸ್ತವ್ಯ ಮಾಡುವುದನ್ನು ಕೇಳಿದ್ದೀರಿ. ಈಗ ಸಹಾಯಕ ಚುನಾಣಾಧಿಕಾರಿಗಳ ಸರದಿ.
ಚುನಾವಣೆಯಲ್ಲಿ ಮತದಾನದ ಪ್ರಾಮುಖ್ಯತೆ ಹಾಗೂ ಮತದಾರರಲ್ಲಿ ರಾಜಕೀಯ ಪಕ್ಷದ ನಾಯಕರು, ಮುಖಂಡರು ಉಂಟು ಮಾಡುವ ಭೀತಿಯನ್ನು ಹೋಗಲಾಡಿಸಿ ಮತದಾರರಲ್ಲಿ ನಿರ್ಭೀತಿ ಹಾಗೂ ಮುಕ್ತ ಮತದಾನಕ್ಕೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಹೊಸಕೋಟೆ ಸಹಾಯಕ ಚುನಾಣಾಧಿಕಾರಿಗಳೊಂದಿಗೆ ತಹಸೀಲ್ದಾರ್ ಗ್ರಾಮವಾಸ್ತವ್ಯ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಹೆಜ್ಜೆಯಿಟ್ಟಿದ್ದು, ಪ್ರಶಂಸೆಗೆ ಕಾರಣವಾಗಿದೆ.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ  ಓರೋಹಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡದೇನಹಳ್ಳಿ ಗ್ರಾಮ ಅತಿ ಸೂಕ್ಷ್ಮ ಮತಗಟ್ಟೆ. ಈ ಮತಗಟ್ಟೆಯಲ್ಲಿ ಗ್ರಾಮವಾಸ್ತವ್ಯಕ್ಕೆ  ಬಂದ ಸಹಾಯಕ ಚುನಾವಣಾಧಿಕಾರಿ ಡಾ. ಎಚ್. ನಟರಾಜ್, ತಹಸೀಲ್ದಾರ್ ಕುಮಾರಸ್ವಾಮಿ ಅವರೊಂದಿಗೆ ಪಿಎಸ್‌ಐ ಬಾಲಾಜಿ ಮೊದಲಾದ ಅಧಿಕಾರಿಗಳು ಸಾಥ್ ನೀಡಿದರು. ಗ್ರಾಮಕ್ಕೆ ಭೇಟಿ ನೀಡಿದ ಚುನಾವಣಾಧಿಕಾರಿಗಳ ತಂಡ ಗ್ರಾಮದ ಮುಖಂಡರು, ಮಹಿಳೆಯರು ಎಲ್ಲರೊಂದಿಗೆ ಸಭೆ ಸೇರಿ ದೇಶದ ಅಭಿವೃದ್ಧಿಯಲ್ಲಿ ಮತದಾನದ ಪ್ರಾಮುಖ್ಯತೆ ಬಗ್ಗೆ ಮುಕ್ತವಾಗಿ ಚರ್ಚಿಸಿದರು. ಈ ಗ್ರಾಮದಲ್ಲಿ ಕಳೆದ ವಿಧಾನ ಸಭಾ ಚುನಾವಣಿ ವೇಳೆ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ಜನರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಮತದಾನದ ವೇಳೆ ತೊಂದರೆ ಉಂಟುಮಾಡಿದರೆ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತೆ. ಜನ ಶಾಂತಿ ಮತ್ತು ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು. ಗ್ರಾಮದಲ್ಲಿ ಅಶಾಂತಿಯನ್ನು ಉಂಟುಮಾಡುವ ಘಟನೆಗಳಿಗೆ ಕೈ ಹಾಕಬಾರದು. ಏ.17ರಂದು ನಡೆಯುವ ಸಾರ್ವತ್ರಿಕ ಚುನಾವಣೆ  ವೇಳೆಯಲ್ಲಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ  ಹಾಗೂ ಶಾಂತಿಯುತ ಮತದಾನ ನಡೆಯುವಂತೆ  ಚುನಾವಣೆ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಗ್ರಾಮವಾಸ್ತವ್ಯದಲ್ಲಿ ಹಾಜರಿದ್ದ ಪೊಲೀಸ ಅಧಿಕಾರಿಗಳು, ಚುನಾವಣಾಧಿಕಾರಿಗಳು ಮತದಾರರ ಪ್ರಶ್ನೆಗಳಿಗೆ ಉತ್ತರಿಸಿ ಜನರಲ್ಲಿ ಮತದಾನ ಬಗ್ಗೆ ಜಾಗೃತಿ ತಂದರು. ಗ್ರಾಮದ ಮುಖಂಡರು, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement