ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಭದ್ರಕೋಟೆ ವಶಕ್ಕೆ ಪಡೆಯಲೇಬೇಕು

Rashmi Kasaragodu
Updated On : 7 Apr 2014, 1:47 am

ರಾಮನಗರ: ಕಳೆದ ಉಪ ಚುನಾವಣೆಯಲ್ಲಿ ಛಿದ್ರವಾದ ಜೆಡಿಎಸ್ ಭದ್ರಕೋಟೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಮತ್ತೆ ವಶಕ್ಕೆ ತೆಗೆದುಕೊಂಡು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಷ್ಠೆ ಉಳಿಸಬೇಕಿದೆ ಎಂದು ಅಭ್ಯರ್ಥಿ ಆರ್. ಪ್ರಭಾಕರರೆಡ್ಡಿ ಹೇಳಿದರು.  ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿ ಹೋಬಳಿಗಳಲ್ಲಿ ಭಾನುವಾರ ಮತಯಾಚನೆ ನಡೆಸಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ರೂಪಿಸಿದ ಕುತಂತ್ರ, ಒಳ ಸಂಚಿನಿಂದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿತ್ತು ಎಂದರು.
ಕ್ಷೇತ್ರದಲ್ಲಿ ಈ ಬಾರಿ ಎದುರಾಳಿ ಪಕ್ಷಗಳ ಯಾವುದೇ ಷಡ್ಯಂತ್ರ ಫಲಿಸುವುದಿಲ್ಲ. ಈ ಅಗ್ನಿ ಪರೀಕ್ಷೆಯಲ್ಲಿ ಜೆಡಿಎಸ್ ಗೆದ್ದೇ ತೀರಲಿದೆ. ಕ್ಷೇತ್ರದಲ್ಲಿ ನಾನು ನೆಪಮಾತ್ರವಷ್ಟೇ. ಇಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎನ್ನುವಂತೆ ಜೆಡಿಎಸ್ ಹೋರಾಡುತ್ತಿದೆ ಎಂದು ತಿಳಿಸಿದರು.
ಬಾಲಕೃಷ್ಣ ವಿಶ್ವಾಸ:  ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 12 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಲ್ಲಿನವರು. ಹೀಗಾಗಿ ಅತ್ಯಧಿಕ ಮತಗಳು ನಮ್ಮ ಪಕ್ಷಕ್ಕೆ ಲಭಿಸಲಿದ್ದು, ಪ್ರಭಾಕರರೆಡ್ಡಿ ಅವರ ಗೆಲುವಿಗೆ ಸಹಕಾರಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಾಂತರದಲ್ಲಿ ತಪ್ಪೇನಿಲ್ಲ: ಲೋಕಸಭೆಗೆ ಸ್ಪರ್ಧಿಸಲು ಕುಮಾರಸ್ವಾಮಿ ಬಯಸಿರಲಿಲ್ಲ. ಬೆಂಗಳೂರು ಗ್ರಾಮಾಂತರದಿಂದ ಪ್ರಭಾಕರರೆಡ್ಡಿ ಹೆಸರು ಪ್ರಕಟಿಸಿದ ಬಳಿಕ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಗೆ ಅಲ್ಲಿನ ಕಾರ್ಯಕರ್ತರಿಂದ ಒತ್ತಡ ಹೆಚ್ಚಿತು. ದೇವೇಗೌಡರೂ ಕುಮಾರಸ್ವಾಮಿ ಸ್ಪರ್ಧೆಯನ್ನು ಬಯಸಿದರು. ಹೀಗಾಗಿ ಅವರು ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಯಾಗಿದ್ದಾರೆ ಎಂದು ಬಾಲಕೃಷ್ಣ ವಿವರಿಸಿದರು.  ಪ್ರಚಾರದಲ್ಲಿ ಜಿ.ಪಂ. ಸದಸ್ಯ ಚಂದ್ರಣ್ಣ, ಜೆಡಿಎಸ್ ಮುಖಂಡರಾದ ರಾಮಯ್ಯ, ಬ್ಯಾಟಪ್ಪ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement