ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

3 ನೂತನ ಆಕರ್ಷಕ ರೈಡ್‌ಗಳಿಗೆ ಚಾಲನೆ

Rashmi Kasaragodu
Updated On : 8 Apr 2014, 10:41 am


ರಾಮನಗರ: ಬಿಡದಿ ಬಳಿಯ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ಮೂರು ನೂತನ ಆಕರ್ಷಕ ರೈಡ್‌ಗಳಿಗೆ ಚಿತ್ರನಟ ಪುನೀತ್ ರಾಜ್‌ಕುಮಾರ್ ಸೋಮವಾರ ಚಾಲನೆ ನೀಡಿ, ಮೈನವಿರೇಳಿಸುವ ಫ್ಲಾಶ್ ಟವರ್ ಆಟವಾಡಿ ಪುಳಕಿತರಾದರು.
ಬೆಂಗಳೂರು ಮತ್ತು ಕೊಚ್ಚಿಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್‌ಗಳನ್ನು ನಿರ್ವಹಣೆ ಮಾಡುತ್ತಿರುವ ವಂಡರ್ ಲಾ ಹಾಲಿಡೇಸ್ ತನ್ನ ಬಿಡದಿ ಪಾರ್ಕ್‌ನಲ್ಲಿ ಫ್ಲಾಶ್ ಟವರ್, ಮಿನಿ ವೆನಿಸ್ ಮತ್ತು ಸ್ಪಿನ್ನಿಂಗ್ ಮಶ್ರೂಂ ರೈಡಿಂಗ್ ಪ್ರಾರಂಭಿಸಿದೆ. ಅವನ್ನು ಪುನೀತ್ ಉದ್ಘಾಟಿಸಿದರು.  ನೂತನವಾಗಿ ಪ್ರಾರಂಭಿಸಿರುವ ಮೂರೂ ರೈಡ್‌ಗಳನ್ನು ಯೂರೋಪಿಯನ್ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿದ್ದು, ಈ ಪೈಕಿ ಫ್ಲಾಶ್ ಟವರ್ ವಯಸ್ಕರ ಪಾಲಿಗೆ ಹೈಥ್ರಿಲ್ ರೈಡ್ ಆಗಿದೆ. ಅದು ಕೆಳಗಿನಿಂದ ಮೇಲಕ್ಕೆ ಹಾರಿಸಿ, ಅದೇ ರಭಸದಲ್ಲಿ ಕೆಳಗೆ ಇಳಿಸುವ ಮನರಂಜನಾ ಆಟವಾಗಿದೆ.
ಹೊಸ ಮಾರುಕಟ್ಟೆ: ವಂಡರ್ ಲಾ ಹಾಲಿಡೇಸ್‌ನ ಅಮ್ಯೂಸ್‌ಮೆಟ್ ಪಾರ್ಕ್ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿ, ಹೊಸ ಮಾರುಕಟ್ಟೆ ಪ್ರವೇಶಿಸಲು ಅಣಿಯಾಗಿದ್ದೇವೆ. ಇಲ್ಲಿ ವಿಶ್ವದರ್ಜೆಯ ಸೇವೆ ಒದಗಿಸಲಾಗುತ್ತಿದೆ ಎಂದು ವಂಡರ್ ಲ್ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ.ಚಿಟ್ಟಿಲಪ್ಪಿಲ್ಲಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement