ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅತ್ಯಾಚಾರ ಮೇಲ್ನೋಟಕ್ಕೆ ಸಾಬೀತು

Lingaraj Badiger
Updated On : 8 Apr 2014, 11:06 am

ಮಾಗಡಿ: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಮೇಲೆ ಪ್ರಭಾರಿ ವಾರ್ಡನ್ ನಡೆಸಿರುವ ಅತ್ಯಾಚಾರ ಪ್ರಕರಣ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು  ಜಿಲ್ಲಾ ಎಸ್ಪಿ ಅನುಪಮ ಅಗರವಾಲ್ ತಿಳಿಸಿದರು.
 ಅವರು ಮಾಗಡಿ ಪಟ್ಟಣದ ಹೊಸಪೇಟೆ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ತನಿಖೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಸತಿ ಶಾಲೆಯಲ್ಲಿ  9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ  ವಿದ್ಯಾರ್ಥಿನಿಯ  ಮೇಲೆ ವಾರ್ಡನ್  ಅತ್ಯಾಚಾರವೆಸಗಿರುವುದು ಅಮಾನೀಯ ಘಟನೆ. ಇದು
ತಡವಾಗಿ ಬೆಳಕಿಗೆ ಬಂದಿದೆ. ಈ ಕೃತ್ಯವೆಸಗಿರುವ ಆರೋಪಿ ಪ್ರಭಾರಿ ವಾರ್ಡನ್ ಯಾಕೂಬ್ ಖಾನ್ ಎಂ. ಘಟನೆ ಮರೆಮಾಚಲೆಂದೇ ಸ್ವಂತ ತಾಲೂಕು ರಾಯಚೂರಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದು,  ಈತ ಈಗಾಗಲೇ ಬೇರೆ ಹುಡುಗಿಯನ್ನು ಮದುವೆ  ಮಾಡಿಕೊಂಡಿದ್ದಾನೆ.
 ಕೃತ್ಯದ ಘಟನೆ ಬಯಲಾದ ಸುದ್ದಿ ತಿಳಿದ ಕೂಡಲೆ ಯಾಕೂಬ್ ಖಾನ್ ಈಗ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳ ವಸತಿ ಶಾಲೆಗಳಲ್ಲಿ ಮಹಿಳಾ ವಾರ್ಡನ್ ನೇಮಕವಾಗಬೇಕಲ್ಲವೆ ಎಂಬ ಪ್ರಶ್ನಗೆ ಮಹಿಳಾ ವಾರ್ಡನ್ ನೇಮಕವಾಗಬೇಕು. ಸಿಬ್ಬಂದಿಯ ಕೊರತೆಯಿದ್ದರೆ ಪ್ರಭಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ಅಥವಾ ನರ್ಸಗಳನ್ನ ನೇಮಕ ಮಾಡಿಕೊಳ್ಳಬಹುದು ಎಂಬ ಸರ್ಕಾರದ ನಿಯಮವಿದೆ. ಇದರಿಂದಾಗಿ ಯಕೂಬ್ ಖಾನ್  ಅವರನ್ನು ಪ್ರಭಾರಿಯಾಗಿ ನೇಮಿಸಿಕೊಂಡಿದ್ದರು. ಮೇಲ್ನೋಟಕ್ಕೆ ವಸತಿ ಶಾಲೆಯ ಪ್ರಾಂಶುಪಾಲರ  ಪಾತ್ರವಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.  ತನಿಖೆಯಲ್ಲಿ ಇಲ್ಲಿನ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಪಾತ್ರವಿದ್ದರೆ ಅವರ  ವಿರುದ್ಧವೂ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
 ಮಕ್ಕಳ ರಕ್ಷಣ ಇಲಾಖೆಯ ಕಲ್ಯಾಣಾಧಿಕಾರಿ ರಾಧಾ ಮಾತನಾಡಿ ವಾರ್ಡನ್ ಯಾಕೂಬ್ ಖಾನ್‌ನಿಂದ
ಅತ್ಯಾಚಾರಕ್ಕೆ ಒಳಗಾಗಿರುವ ವಿದ್ಯಾರ್ಥಿನಿಯ ಪೋಷಕರು ಒಪ್ಪಿದರೆ ಈಕೆಯನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ತೋ.ವಿ. ಗಿರೀಶ್, ಸಿ.ಜಯರಾಮು, ಕಲ್ಕೆರೆ ಶಿವಣ್ಣ ಎಸ್ಪಿ ಅಗರ್ವಾಲ್ ಅವರಲ್ಲಿ  ವಿದ್ಯಾರ್ಥಿನಿ ರಕ್ಷಣೆ ಹಾಗು ಇಲಾಖೆ ನಿರ್ಲಕ್ಷ್ಯತೆ ಕುರಿತು ಚರ್ಚಿಸಿದರು.
ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಂಟಿ ನಿರ್ದೇಶಕ ಷಣ್ಮಖಸ್ವಾಮಿ, ಜಿಲ್ಲಾ ಸಿಡಿಪಿಓ ಉಪ ನಿರ್ದೇಶಕಿ ಎಸ್.ಚಂದ್ರಮ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ವಸತಿ ನಿಲಯದ ಪ್ರಾಂಶುಪಾಲರಾದ ವಿ.ಲೀಲಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement