ಕಾಡಿಗೆ ಬೆಂಕಿ: ಲಕ್ಷಾಂತರ ರು. ನಷ್ಟ
ಮಾಗಡಿ: ಬಿಸ್ಕೂರು ಬಳಿ ಕಾಡಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ನೂರಾರು ಮರಗಿಡಿಗಳು, ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಹಾನಿಯಾಗಿದೆ ಎಂದು ಬಿಸ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸಹೇಲ್ ತಿಳಿಸಿದರು.
ಬಿಸ್ಕೂರು ತಿಪ್ಪಸಂದ್ರ ನಡುವೆ ಇರುವ ಸುಮಾರು 400 ಎಕರೆ ಅರಣ್ಯ ಪ್ರದೇಶದ ಒಂದು ಭಾಗದಲ್ಲಿ ಸುಮಾರು 1 ಗಂಟೆಗಳ ಕಾಲ ಬೆಂಕಿ ಉರಿಯುತ್ತಿತ್ತು. ಇದನ್ನು ನಂದಿಸಲು ಸುತ್ತಮುತ್ತಲ ಗ್ರಾಮದ ಮುಖಂಡರು ಯತ್ನಿಸಿದರು.
ಅಗ್ನಿಶಾಮಕ ದಳಕ್ಕೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಸಹ ದೂರವಾಣಿ ಮೂಲಕ ವಿಷಯ ಮುಟ್ಟಿಸಲಾಯಿತು. ಸಕಾಲಕ್ಕೆ ಅಗ್ನಿಶಾಮಕ ದಳ ಬಾರದೆ ಸಾಕಷ್ಟು ಕಾಡು ಸುಟ್ಟು ಲಕ್ಷಾಂತರ ರು. ಮೌಲ್ಯದ ಗಿಡ ಮರಗಳಉ ಹಾನಿಗೊಳಗಾದವು ಎಂದು ವಿವರಿಸಿದರು.