ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವೇಗೌಡರ ವಿರುದ್ಧ ಕರಪತ್ರ ಹಂಚಿದ್ದಕ್ಕೆ ಆಕ್ರೋಶ

Lingaraj Badiger
Updated On : 8 Apr 2014, 11:04 am

 ನೆಲಮಂಗಲ: ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಪಮಾನವೆಸಗುವ ದುರುದ್ದೇಶದಿಂದ ಕರಪತ್ರ ಹಂಚಿರುವ ಯಂಟಗಾನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಬೈರೇಗೌಡ ಕೂಡಲೇ ಕ್ಷಮೆಯಾಚಿಸಬೇಕು ಎಂದು ಜೆಡಿಎಸ್ ಮುಖಂಡ ವಕೀಲ ಕೇಶವಮೂರ್ತಿ ಕಿಡಿಕಾರಿದ್ದಾರೆ.
ಕರಪತ್ರದಲ್ಲಿ ಜಾಗೃತ ಮತದಾರರ ವೇದಿಕೆ ಎಂದು ಬಳಸಿಕೊಂಡಿದ್ದು, ಈ ವೇದಿಕೆ ನೋಂದಣಿಯಾಗಿಲ್ಲ. ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎನ್ನುವ ಸಲುವಾಗಿ ಕುಮಾರಸ್ವಾಮಿ ವಿರುದ್ಧಇಲ್ಲಸಲ್ಲದ ಆರೋಪಗಳನ್ನು ಕರಪತ್ರದಲ್ಲಿ ಮುದ್ರಿಸಿ  ಪತ್ರಿಕೆಗಳ ವಿತರಕರಿಂದ ಮನೆ ಮನೆಗೆ ತಲುಪಿಸಿರುವ ಅವರು ಕ್ಷಮೆಯಾಚಿಸಿದಿದ್ದರೆ ಉಗ್ರ ಹೋರಾಟ ಪ್ರತಿಭಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ಹೇಮಂತ್‌ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement