ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಮೋತ್ಸವ ಕಾರ್ಯಕ್ರಮ

Lingaraj Badiger
Updated On : 8 Apr 2014, 11:07 am

ಕುಣಿಗಲ್: ಪಟ್ಟಣದ ರಮಣ ಬ್ಲಾಕ್‌ನಲ್ಲಿರುವ ಶ್ರೀರಾಮಸೇವಾ ಮಂಡಳಿ ಟ್ರಸ್ಟ್ ವತಿಯಿಂದ ಶ್ರೀರಾಮಮಂದಿರದಲ್ಲಿ ಶ್ರೀರಾಮ ನವಮಿಯ ಅಂಗವಾಗಿ ರಾಮೋತ್ಸವ ಕಾರ್ಯಕ್ರಮಗಳು ಇದೇ ಮಾಹೆಯ  8ರಿಂದ18ರವರೆಗೆ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಸಂಜೆ ಆರುವರೆಗಂಟೆಗೆ ಧಾರ್ಮಿಕ, ಸಾಂಸ್ಕೃತಿಕ,ದಾಸಸಾಹಿತ್ಯ ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಏ. 8ರಂದು ವಿಶೇಷ ಪೂಜೆ, ಅರುಣ ನಮಸ್ಕಾರ ರಾಮಾಯಣ ಪಾರಾಯಣ, ಸಂಜೆಗೆ  ಹನುಮದ್ ವೈಭವ, ಸುಂದರಕಾಂಡದ ಅವಲೋಕನ ಕಾರ್ಯಕ್ರಮ, 9ರ ಸಂಜೆ-ಭಾವಾಲಯ ತಂಡದವರಿಂದ ಸುಗಮ ಸಂಗೀತ, 10ರಂದು ತುಮಕೂರು ಮೆಳೆಕೋಟೆಯ ಮಾರುತಿ  ಭಜನಾ ಮಂಡಳಿಯವರಿಂದ ಭಜನೆ, 11ರಂದು  ಗದಗ-ಬಿಜಾಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರಿಂದ ಭಜನೆ ಮತ್ತು ಪ್ರವಚನೆ, 12ರಂದು ಬೆಳಗ್ಗೆ ಹೆಬ್ಬೂರು ಕೋದಂಡಾಶ್ರಮದ ಮಾದವಾಶ್ರಮಸ್ವಾಮೀಜಿ ಸಾನಿಧ್ಯದಲ್ಲಿ ವಿವಿಧ ಹೋಮಗಳು, ಸಂಜೆ- ತುಮಕೂರು ರಾಮಕೃಷ್ಣ ಮಠದ ವೀರೇಶಾನಂದಸರಸ್ವತಿ ಸ್ವಾಮೀಜಿಯವರಿಂದ ಭಜನೆ ಮತ್ತು ಪ್ರವಚನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement