ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿದ್ಯಾರ್ಥಿಗಳ ರಸ್ತೆ ತಡೆ, ಪ್ರತಿಭಟನೆ

Lingaraj Badiger
Updated On : 8 Apr 2014, 11:05 am

ಮಾಗಡಿ: ಅಸಮರ್ಪಕ ಬಸ್ಸುಗಳ ಸಂಚಾರದಿಂದ ವಿದ್ಯಾರ್ಥಿ ಪರೀಕ್ಷೆ ಸಮಯಕ್ಕೆ ಸರಿಯಾಗಿ ತಲುಪಲಾಗದ ಪರಿಸ್ಥಿತಿಯಿಂದ ಕಂಗಾಲದ ವಿದ್ಯಾರ್ಥಿಗಳು  ದಿಢೀರ್ ರಸ್ತೆ ತಡೆ ನಡೆಸಿ ಬಸ್ ಸಂಚಾರ ಅವ್ಯವಸ್ಥೆ ವಿರುದ್ಧ ಪ್ರತಿಭಟಿಸಿದ ಘಟನೆ ಸೋಮವಾರ ಬೆಳಿಗ್ಗೆ ಕಲ್ಯಾಗೇಟ್ ವೃತ್ತದಲ್ಲಿ ನಡೆಯಿತು.
  ನೂರಾರು ವಿದ್ಯಾರ್ಥಿ ಹಾಗೂ ಪ್ರಯಾಣಿಕರು ಬಸ್ ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,ಇದು ಕೇವಲ ಒಂದು ದಿನದ ಸಮಸ್ಯೆಯಲ್ಲ ನಿತ್ಯ ಗೋಳಾಗಿದೆ. ಹರಿದ ಹಾಗೂ ಧೂಳು ಹಿಡಿದ ಸೀಟುಗಳು, ಬಹುತೇಕ ಶಿಥಿಲ ಬಸ್ಸುಗಳು ಸಂಚರಿಸುತ್ತಿದ್ದು, ಎಲ್ಲಂದರಲ್ಲಿ ಕೆಟ್ಟು ನಿಲ್ಲುತ್ತವೆ. ಬಸ್ ಪಾಸ್‌ಗಳಿದ್ದರೂ ಉಪಯೋಗಕ್ಕೆ ಬಾರದ ಸ್ಥಿತಿಯಾಗಿದೆ.
ಈ ಬಗ್ಗೆ ಅಗತ್ಯ ಕ್ರಮಕ್ಕೆ ಹಲವಾರು ಬಾರಿ ಡಿಪೋ ವ್ಯವಸ್ಥಾಪಕರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ,  ಸಂಬಂಧಪಟ್ಟ ಶಾಸಕರು ಅನೇಕ ಬಾರಿ ಡಿಪೋ ಮ್ಯಾನೇಜರಿಗೆ ಸಮರ್ಪಕ ಬಸ್ ಸಂಚಾರ ಸೇವೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ  ಬಸ್‌ಗಳ ಅಸಮರ್ಪಕ ಸಂಚಾರ ನಿಂತಿಲ್ಲ.
 ಸಮಯ ಪಾಲನೆಯಿಲ್ಲ, ಅಗತ್ಯ ಪಾಸ್‌ಗಳ ಕೊರತೆಯೂ ಇದೆ. ಸಮರ್ಪಕ ಬಸ್ಸುಗಳ ಸಂಚಾರಕ್ಕೆ ಹಾಗೂ ಸಮಯ ಪಾಲನೆ ಮಾಡದ ಬಸ್ ಚಾಲಕರ ಹಾಗು ಕಂಡಕ್ಟರ್ ವಿರುದ್ಧ ಕಾನೂನು ರೀತ್ಯ ಡಿಪೋ ವ್ಯವಸ್ಥಾಪಕರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇಲ್ಲದಿದ್ದರೆ ಸಾರ್ವಜನಿಕರು ಒಗ್ಗಟ್ಟಾಗಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಡಿಪೋಗೆ ಬೀಗ ಜಡಿದು ಉಗ್ರ ಪ್ರತಿಭಟನೆಗೆ ಇಳಿಯುವುದಾಗಿ ಎಚ್ಚರಿಸಿದರು.
  ನೂರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement