ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶ್ರೀರಂಗ ಏತ ನೀರಾವರಿ ಯೋಜನೆ ಅನುಷ್ಠಾನ: ಡಿ.ಕೆ. ಸುರೇಶ್ ವಿಶ್ವಾಸ

Lingaraj Badiger
Updated On : 8 Apr 2014, 11:06 am

ಮಾಗಡಿ: ಜಿಲ್ಲೆಗೆ ಶ್ರೀರಂಗ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡುವ ಗುರಿ ಕಾಂಗ್ರೆಸ್ ಹೊಂದಿದೆ ಎಂದು  ಬೆಂಗಳೂರು ಗ್ರಾಮಾಂತರ ಲೋಕಸಭಾ ಕಾಂಗ್ರೆಸ್  ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.
    ಅವರು ಮಾಗಡಿ ತಾಲೂಕಿನ ವರದೇನಹಳ್ಳಿ ವೃತ್ತದಲ್ಲಿ ರೋಡ್ ಶೋ ನಡೆಸಿ ಮಾತನಾಡಿ,  ಕಳೆದ ಉಪ ಚುನಾವಣೆಯಲ್ಲಿ ಅಧಿಕ ಮತದಿಂದ ನನ್ನನ್ನು ಸಂಸದ ಸ್ಥಾನಕ್ಕೆ ಆಶೀರ್ವದಿಸಿದ್ದೀರಿ, ನಾನು ಕಳೆದ 6 ತಿಂಗಳಿನಿಂದ ಕ್ಷೇತ್ರದಲ್ಲಿ ಕೈಗೊಂಡ ಪ್ರವಾಸ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳು ನನ್ನ ಗಮನಕ್ಕೆ ಬಂದವು. ಅವುಗಳನ್ನು ಪರಿಹರಿಸಲು ಯತ್ನಿಸಿದ್ದೇನೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ನನ್ನನ್ನು ಆಯ್ಕೆ ಮಾಡಿ ಎಂದರು,
ಇದೇ ವೇಳೆ ಬೆಳಗುಂಬ, ವಿ.ಜಿ.ದೊಡ್ಡಿ, ಅಜ್ಜನಗಳ್ಳಿ, ನೇತೇನಹಳ್ಳಿ, ಮತ್ತೀಕೆರೆ, ಕಲ್ಲುದೇವನಹಳ್ಳಿ, ತಿಪ್ಪಸಂದ್ರ, ಕುದೂರು ಇತರೆಡೆ  ರೋಡ್ ಶೋ ನಡೆಸಿ ಮತಯಾಚಿಸಿದರು. ಕೆಪಿಸಿಸಿ ಸದಸ್ಯ ಎ.ಮಂಜು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಬೆಂಗಳೂರು ಮಹಾ ನಗರ ಪಾಲಿಕೆ ಮಾಜಿ ಉಪ ಮೇಯರ್ ಬಿ. ಎಸ್. ಪುಟ್ಟರಾಜು, ರಾಜ್ಯ ಮಹಿಳಾ ಕಾರ್ಯದರ್ಶಿ ಮಾಗಡಿ ಕಮಲಮ್ಮ, ಚಿಗಳೂರು ಗಂಗಾಧರ್, ಬಿ.ಎಸ್. ಕುಮಾರ್, ಬಿ.ವಿ. ಜಯರಾಮು, ಎಂ.ಎನ್. ಮಂಜುನಾಥ್, ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಶರಥ, ಕೆ.ವಿ. ಬಾಲು, ಶಶಾಂಕ್, ಕಾರ್ತಿಕ್, ಬಿ.ಆರ್. ಗುಡ್ಡೇಗೌಡ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement