ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಅಂತರ್ಜಾಲ ಬಳಕೆ ಅಗತ್ಯಕ್ಕಷ್ಟೆ ಸಾಕು'

Mainashree
Updated On : 26 Apr 2014, 12:16 pm

ಮಾಗಡಿ: ಅಗತ್ಯಕ್ಕೆ ತಕ್ಕಂತೆ ಅಂತರ್ಜಾಲ ಬಳಸಿದರೆ ತಪ್ಪೇನಿಲ್ಲ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಖ ಡಾ.ಸಿ. ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ವಿದ್ಯಾಭ್ಯಾಸಕ್ಕೆ ಅನುಗುಣವಾದ ಅಂತರ್ಜಾಲ ಹುಡುಕಿ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಸುಮ್ಮನೆ ಜಾಲದ ದಾಸರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ಓದು ವಯಸ್ಸು, ಸಾಧಿಸುವ ಛಲದಿಂದ ಮುನ್ನೆಡೆಯಿರಿ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಭಾಗ್ಯ ಲಕ್ಷ್ಮೀ ತಿಳಿಸಿದರು.
ಪ್ರಾಂಶುಪಾಲ ಫಾರುಖ್ ಅಧ್ಯಕ್ಷತೆ ವಹಿಸಿದ್ದರು.  
ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ನಂತರ 2013-14ನೇ ಕಾಲೇಜು ಸಂಚಿಕೆಯನ್ನು ಉಪನ್ಯಾಸಕ ಜಗದೀಶ್ ಮತ್ತಿತರರು ಬಿಡುಗಡೆ ಮಾಡಿದರು.
ಉಪನ್ಯಾಸಕರಾದ ತಿಮ್ಮಹನುಮಯ್ಯ, ಮಂಜುನಾಥ್, ಪಿ.ನಂಜುಂಡ, ಶಿವಕುಮಾರ್, ಉಷಾ, ನಂದಿನಿ, ವೀಣಾ, ಗೀತಾ, ವೀಣಾ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement