ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

2 ದಿನಗಳ ಆರೋಗ್ಯ ಚೇತನ ಕಾರ್ಯಕ್ರಮ ಯಶಸ್ವಿ

Mainashree
Updated On : 28 Apr 2014, 12:07 pm

ದೊಡ್ಡಬಳ್ಳಾಪುರ: ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದ ಆದರ್ಶ ಚೇತನ ಟ್ರಸ್ಟ್ ಮತ್ತು ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ (ನಾಡಿ ಪರೀಕ್ಷೆ ಮೂಲಕ ಚಿಕಿತ್ಸೆ) ಶಿಬಿರ 2 ದಿನಗಳ ಕಾಲ ಆರೋಗ್ಯ ಚೇತನ ಕಾರ್ಯಕ್ರಮ ಇಲ್ಲಿನ ವಿವೇಕಾನಂದ ನಗರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ರುಮಾಲೆ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ನಗರ ಅಪರಾಧ ವಿಭಾಗದ ಆರಕ್ಷಕ ಉಪನಿರೀಕ್ಷಕ ಕೃಷ್ಣಕುಮಾರ್ ಉದ್ಘಾಟಿಸಿದರು.
ಆದರ್ಶ ಚೇತನ ಟ್ರಸ್ಟ್‌ನ ಅಧ್ಯಕ್ಷ ಬಿ.ವಿ.ಲೋಕೇಶ್, ಜೆಡಿಎಸ್ ಯುವ ಘಟಕದ ನಗರಾಧ್ಯಕ್ಷ ರಾಘವ, ಡಾ.ರವಿಶಂಕರ್ ಗುರೂಜಿ ಆಶ್ರಮದ ಡಾ.ವಿಷ್ಣು, ರೇಷ್ಮ, ಹನುಮಂತೇಶ್, ಗ್ರಾಮದ ಮುಖಂಡರಾದ ನಾರಾಯಣ್, ಮಹೇಶ್, ಸಂಜೀವ್, ಅಶ್ವತ್ಥ್ ಮತ್ತಿತರರು ಹಾಜರಿದ್ದರು. ಹಲವಾರು ಮಂದಿ ಗ್ರಾಮಸ್ಥರು ಶಿಬಿರದಲ್ಲಿ ಆರೋಗ್ಯ ತಪಾಸಣೆಗೊಳಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement