ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಡಿವ ನೀರು ನೀಡುವುದು ಪುಣ್ಯದ ಕೆಲಸ: ಸ್ವಾಮೀಜಿ

Mainashree
Updated On : 28 Apr 2014, 12:12 pm

ಕೊರಟಗೆರೆ: ಜನತೆಗೆ ಕುಡಿಯುವ ನೀರು ನೀಡುವುದು ಹಸಿದವನಿಗೆ ಊಟ ನೀಡಿದಕ್ಕಿಂತಲೂ ಹೆಚ್ಚಿನ ಪುಣ್ಯದ ಕೆಲಸವಾಗಿದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ತೋವಿನಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧಗಂಗಾ ಯೋಜನೆಯಲ್ಲಿ ಗ್ರಾಮೀಣ ಜನತೆಗೆ ಕಮ್ಮಿ ಬೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೇವಲ ಮಾಹಿತಿ ಜಾಗೃತಿ ಮೂಡಿಸದೆ ಅದರೊಟ್ಟಿಗೆ ಗ್ರಾಮೀಣ ಭಾಗದ ಜನತೆಯ ಕುಡಿಯುವ ನೀರಿನ ಕಷ್ಟ ಅರಿತು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿ ಗ್ರಾಮದ ಜನರಿಗೆ ಕಡಿಮೆ ಬೆಲೆಯಲ್ಲಿ ಪ್ರತಿಯೊಬ್ಬರಿಗೆ ನೀರನ್ನು ವಿತರಿಸುವ ಕಾರ್ಯ ಉತ್ತಮವಾಗಿತ್ತು ಎಂದರು.
ಶುದ್ಧ ನೀರು ಬಳಸಿ: ಆದ್ದರಿಂದ ಎಲ್ಲರೂ ಶುದ್ದ ನೀರು ಕುಡಿದು ಮುಂದಿನ ದಿನಗಳಲ್ಲಿ ಬರುವ ಕಾಯಿಲೆಗಳಿಗೆ ಮುಕ್ತಾಯ ಹೇಳಿ ಆರೋಗ್ಯ ಕಾಪಾಡಿ ಕೊಳ್ಳುವಲ್ಲಿ ಎಲ್ಲರೂ ಮುತವರ್ಜಿ ವಹಿಸಬೇಕೆಂದು ಶುಭ  ಹಾರೈಸಿದರು.
ಜಿ.ಪಂ. ಸದಸ್ಯ ಪ್ರಸನ್ನಕುಮಾರ್ ಮಾತನಾಡಿ ಗ್ರಾಮದಲ್ಲಿ ಫ್ಲೋರೈಡ್ ಅಂಶ ನೀರಿನಲ್ಲಿ ಹೆಚ್ಚಿರುವುದರಿಂದ ಗ್ರಾಮ ಪಂಚಾಯತ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಲಿ ಪ್ರಾರಂಭಿಸಿದ್ದು ಶುದ್ಧ ನೀರು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪಿ.ಕೆ. ಪುರುಷೋತ್ತಮ್ ಮಾತನಾಡಿ ಕ್ಷೇತ್ರದ ಯೋಜನೆ ಮತ್ತು ಗ್ರಾಮ ಪಂಚಾಯತ್ ಸಹಕಾರದಲ್ಲಿ ತೋವಿನಕೆರೆ ಗ್ರಾಮದಲ್ಲಿ ಪ್ರಾರಂಭವಾದ ಶುದ್ಧ ಕುಡಿಯುವ ನೀರಿನ ಘಟಕವು ಗ್ರಾಮದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಪೂಜ್ಯರ ಆಶಯದಂತೆ ಪ್ರಾರಂಭಿಸಲಾಗಿದೆ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮರಿಯಪ್ಪ, ಯೋಜನಾಧಿಕಾರಿ ಎ.ಮುರಳೀಧರ. ಸಮನ್ವಯಾಧಿಕಾರಿ ಚನ್ನವೀರಪ್ಪಕುಂಬಾರ, ಮೇಲ್ವಿಚಾರಕ ಕೋದಂಡರಾಮ, ವಲಯ ಮೇಲ್ವಿಚಾರಕ ಸುರೇಶ್, ನೇತ್ರಾವತಿ, ಮಂಜುಳ, ಮಂಜಮ್ಮ ಸೇರಿದಂತೆ ಸೇವಾಪ್ರತಿನಿಧಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement