ಕೆಂಕೇರಮ್ಮ ಅಗ್ನಿಕೊಂಡೋತ್ಸವ
ಕನಕಪುರ: ಕನಕಪುರದ ಗ್ರಾಮದೇವತೆ ಹಲಸಿನಮರದೊಡ್ಡಿಯಲ್ಲಿನ ಕೆಂಕೇರಮ್ಮ ಅಗ್ನಿಕೊಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ಏ.29 ರಿಂದ ಮೇ 2 ರ ವರೆಗೆ ನಾಲ್ಕುದಿನಗಳ ಕಾಲ ನಡೆಯಲಿದೆ. ಸಮಾರಂಭದ ಅಂಗವಾಗಿ ಏ.29 ರಂದು ಹೋಮ, ಅಭಿಷೇಕ, ಅಲಂಕಾರ ಹಾಗೂ ಎಳವಾರ. ಏ.30 ರಂದು ಅಗ್ನಿಕೊಂಡೋತ್ಸವ, ಮೇ 1 ರಂದು ಮಧ್ಯಾಹ್ನ ರಥೋತ್ಸವ, ಮೇ 2 ರಂದು ಸಿಡಿ ಉತ್ಸವ, ಜಾತ್ರೆ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ಟುಡಿಯೋ ಪುಟ್ಟರಾಮು ಕೋರಿದ್ದಾರೆ.