ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೃಷ್ಣಪ್ಪಗೆ ತಾಲೂಕು ಯಾದವ ಸಂಘ ಶ್ರದ್ಧಾಂಜಲಿ

Mainashree
Updated On : 29 Apr 2014, 12:24 pm

ದೊಡ್ಡಬಳ್ಳಾಪುರ: ಹಿರಿಯ ರಾಜಕೀಯ ಮುತ್ಸದ್ದಿ ಎ.ಕೃಷ್ಣಪ್ಪ ನಿಧನಕ್ಕೆ ದೊಡ್ಡಬಳ್ಳಾಪುರ ತಾಲೂಕು ಯಾದವರ ಸಂಘದ ನೇತೃತ್ವದಲ್ಲಿ ರಾಜಶ್ರೀ ಕಂಫರ್ಟ್ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
 ಕಾರ್ಯಕ್ರಮದಲ್ಲಿ ಮಾತನಾಡಿದ ಯಾದವ ಸಂಘದ ಮುಖಂಡರು, ಹಿರಿಯ ರಾಜಕಾರಣಿಯಾಗಿ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನು ಹೊಂದಿದ್ದ ಕೃಷ್ಣಪ್ಪ ಆಕಸ್ಮಿಕ ನಿಧನದಿಂದ ಅಪಾರ ನೋವಾಗಿದೆ. ರಾಜಕಾರಣ ಮತ್ತು ಜನಾಂಗದ ಅಭಿವೃದ್ಧಿ ವಿಚಾರದಲ್ಲಿ ವಿಶಿಷ್ಟ ರೀತಿಯ ಆಲೋಚನೆಗಳನು ಹೊಂದಿದ್ದರು.
 ಯಾದವರ ಪ್ರತಿನಿಧಿಯಾಗಿ ಸಮಾಜದ ಬೆಳವಣಿಗೆಯ ದೃಷ್ಟಿಯಲ್ಲಿ ಅನೇಕ ಯೋಜನೆಗಳನು ಹಾಕಿಕೊಂಡಿದ್ದರು. ಅವರ ಪರಿಶ್ರಮ ಮತ್ತು ಸೇವೆ ಇನೂ ಹಲವು ಕಾಲ ಈ ರಾಜ್ಯದ ಯಾದವ ಜನಾಂಗಕ್ಕೆ ಸಲ್ಲಬೇಕಿತ್ತು ಎಂದರು.ಮುಖಂಡರಾದ ಎನ್.ಕೆ.ರಮೇಶ್, ಕೃಷ್ಣಮೂರ್ತಿ ಇನೂ ಮೊದಲಾದವರು ಭಾಗವಹಿಸಿದ್ದರು.
ರಾಜ್ಯ ಮಟ್ಟದ ಜಾಗೃತಿ ಶಿಬಿರ
ರಾಮನಗರ: ಯುವಜನರಲ್ಲಿ ವ್ಯಕ್ತಿತ್ವ ನಿರ್ಮಾಣ ಹಾಗೂ ಅವರನು ಸ್ವಾವಲಂಬಿಗಳಾಗಿ ರೂಪಿಸುವ ಸಲುವಾಗಿ ಮೇ 1ರಿಂದ 10ರವರೆಗೆ ಬಾಲಗಂಗಾಧರನಾಥ ಸ್ವಾಮಿ ಅಂಧರ ಉಚಿತ ವಸತಿ ಶಾಲೆಯಲ್ಲಿ ರಾಜ್ಯ ಮಟ್ಟದ ಜಾಗೃತಿ ಶಿಬಿರ ಆಯೋಜಿಸಲಾಗುವುದು ಎಂದು ಜೆಎಸ್ಬಿ ಅಂಧರ ಶಾಲೆ ಮುಖ್ಯಸ್ಥ ಅನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು.
  ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಬೈರವೈಕ್ಯ  ಡಾ.ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದದಿಂದ ಕಳೆದ 18 ವರ್ಷದಿಂದ ಇಂತಹ ಶಿಬಿರಗಳನು ಆಯೋಜಿಸಿ, ಯುವಜನರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
  ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ, ಒದಗಿಸುವುದರ ಜತೆಗೆ ಶಿಬಿರಕ್ಕೆ ಸಂಬಂಧಿಸಿದ ಸಂಸ್ಕಾರ ಸೌರಭ ಎಂಬ ಪುಸ್ತಕವನು, ಲೇಖನ ಸಾಮಗ್ರಿ ಹಾಗೂ ಸಮವಸ್ತ್ರಗಳನು ನೀಡಲಾಗುವುದು ಎಂದರು.
 ಶಿಬಿರದಲ್ಲಿ ಪರಿಸರ ನೈರ್ಮಲ್ಯ, ದೈನಂದಿನ ವ್ಯಾಯಾಮ, ಆರೋಗ್ಯ ರಕ್ಷಣೆಯ ಅರಿವು, ಸಂಸ್ಕೃತಿ ಸದಾಚಾರ, ಪ್ರಾರ್ಥನೆ, ಧ್ಯಾನ, ನೀತಿ ಸಂಹಿತೆ ಮತ್ತಿತರ ವಿಷಯಗಳ ಕುರಿತು ಪರಿಣಿತ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ. ಇವುಗಳ ಜತೆಗೆ ಯೋಗಾಭ್ಯಾಸ, ಜ್ಯೋತಿಷ್ಯ, ಭಜನೆ, ಪೂಜಾವಿಧಿಗಳು ಹಾಗೂ ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
 12 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಶಿಬಿರಾರ್ಥಿಗಳು ವಾಸ್ತವ್ಯಕ್ಕೆ ಅಗತ್ಯವಿರುವ ಉಡುಪು, ಹೊದಿಕೆ, ತಟ್ಟೆ-ಲೋಟ, ಯೋಗಾಭ್ಯಾಸಕ್ಕೆ ಸೂಕ್ತ ಉಡುಪು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನು ಜತೆಯಲ್ಲಿ ತರಬೇಕು. ಭಾಗವಹಿಸಲಿಚ್ಚಿಸುವವರು ಮೇ 30ರೊಳಗೆ ಆದಿಚುಂಚನಗಿರಿ ಶಾಖಾಮಠಗಳಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ9141433709, 9740222169 ಸಂಪರ್ಕಿಸಬಹುದು ಎಂದು ತಿಳಿಸಿದರು. ಶಿಬಿರ ನಿರ್ದೇಶಕ ನರಸಿಂಹಮೂರ್ತಿ, ಜೆಎಸ್ಬಿ. ಅಂಧರ ಶಾಲೆಯ ಮುಖ್ಯ ಶಿಕ್ಷಕ ಶಿವರಾಂ ಮತ್ತಿತರರು ಇದ್ದರು.
ಅಂಧ ವಿದ್ಯಾರ್ಥಿಗಳಿಂದ ಅರ್ಜಿ
ರಾಮನಗರ: ದೃಷ್ಟಿದೋಷವುಳ್ಳ ಮಕ್ಕಳ ಶಿಕ್ಷಣಕ್ಕಾಗಿ  28 ವರ್ಷದಿಂದ ಶ್ರಮಿಸುತ್ತಿರುವ ನಗರದ ಹೊರ ವಲಯದಲ್ಲಿರುವ ಬಾಲಗಂಗಾಧರನಾಥ ಸ್ವಾಮಿ ಅಂಧರ ಶಾಲೆ 2014-15ನೇ ಸಾಲಿಗೆ 1 ರಿಂದ 10ನೇ ತರಗತಿವರೆಗಿನ ಪ್ರವೇಶಕ್ಕೆ ಅರ್ಹ ಅಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
 1 ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ಹಾಗೂ ವಸತಿ, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಸತಿ ಸೌಲಭ್ಯ, ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಶಿಕ್ಷಣ ಸಲಕರಣೆಗಳು, ಕಂಪ್ಯೂಟರ್ ಶಿಕ್ಷಣ, ಸಂಗೀತ ಶಿಕ್ಷಣ, ಯೋಗ, ವೇದ-ಸಂಸ್ಕೃತ ಅಭ್ಯಾಸ, ಸ್ವಯಂ ಉದ್ಯೋಗ ತರಬೇತಿ, ಉಚಿತ ವೈದ್ಯಕೀಯ ಸೌಲಭ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಶಾಲಾ ವಾಹನ ಸೌಲಭ್ಯಗಳನು ನೀಡಲಾಗುವುದು. ವಿವರಗಳಿಗೆ ಬಾಲಗಂಗಾಧರನಾಥಸ್ವಾಮಿ ಅಂಧರ ಉಚಿತ ವಸತಿಯುತ ಶಾಲೆ, ಬಿ.ಎಂ. ರಸ್ತೆ ಅರ್ಚಕರಹಳ್ಳಿ, ರಾಮನಗರ. ಮೊ9141433709, 9740222169, ದೂ080-27201090, 27201091 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement