ಟೊಯೊಟ ಸ್ಕಿಲ್ ಕಂಟೆಸ್ಟ್ ಜರ್ನಿ ವಿಜೇತರಿಗೆ ಪ್ರಶಸ್ತಿ
ರಾಮನಗರ: ದೇಶದಾದ್ಯಂತ ಇರುವ ಟೊಯೊಟ ಡೀಲರ್ಷಿಪ್ಗಳಲ್ಲಿ ಸರ್ವಿಸ್ ವಿಭಾಗದ ಸಿಬ್ಬಂದಿ ಹಾಗೂ ಮಾರಾಟ ವರ್ಗದ ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷೇತ್ರಗಳಲ್ಲಿನ ಜ್ಞಾನ ಹಾಗೂ ಕೌಶಲ ಪರಿಶೀಲಿಸಲು, ಟೊಯೊಟ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಆಯೋಜಿಸಿದ್ದ ಟೊಯೊಟ ಸ್ಕಿಲ್ ಕಂಟೆಸ್ಟ್ ಜರ್ನಿಎಂಬ ವಿನೂತನ ಸ್ಪರ್ಧೆಯ ವಿಜೇತರಿಗೆ ಟೊಯೊಟ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಯೊವು ಇಷಿ ಪ್ರಶಸ್ತಿ ವಿತರಿಸಿದರು. ದೇಶಾದ್ಯಂತ 250 ನಾನಾ ಸ್ಥಳಗಳ ಡೀಲರ್ಷಿಪ್ಗಳ ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಟಿಕೆಎಂ ತನ್ನ ಸರ್ವಿಸ್ ಸಿಬ್ಬಂದಿಗಾಗಿ ಈ ರೀತಿಯ ಕೌಶಲ ಸ್ಪರ್ಧೆಯನ್ನು 2003ರಿಂದ ನಡೆಸುತ್ತ ಬಂದಿದೆ. 13ನೇ ರಾಷ್ಟ್ರೀಯ ಕೌಶಲ ಚಾಂಪಿಯನ್ಷಿಪ್ ಅನ್ನು ಬೆಂಗಳೂರಿನ ಬಿಡದಿ ಬಳಿಯಿರುವ ಟೊಯೊಟ ಕಿರ್ಲೋಸ್ಕರ್ ಮೋಟಾರ್ ಘಟಕದ ಬಳಿ ಜುಲೈ 24, 25ರಂದು ನಡೆಸಲಾಯಿತು. ಟೊಯೊಟ ಕಿರ್ಲೋಸ್ಕರ್ ಮೋಟಾರ್ಸ್ನ ವ್ಯವಸ್ಥಾಪಕ ನಿರ್ದೇಶಕ ನಯೋವು ಇಷಿ, ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ಹಾಗೂ ನಿರ್ದೇಶಕ ಎನ್.ರಾಜ ವಿಜೇತರಿಗೆ ಟ್ರೋಫಿಗಳ ಜತೆಗೆ ರು. 40 ಸಾವಿರದವರೆಗೆ ಬಹುಮಾನ ನೀಡಿದರು.