ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ಕಚೇರಿಗೆ ಲೋಕಾ ದಾಳಿ

Rashmi Kasaragodu
Updated On : 2 Aug 2014, 12:40 pm

ದೇವನಹಳ್ಳಿ:  2004 ರಿಂದ 2012 ರವರೆಗೆ ತಹಸೀಲ್ದಾರ್ ಆಗಿದ್ದವರು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಿನಿ ವಿಧಾನಸೌಧಕ್ಕೆ ಆಗಮಿಸಿ ನೂರಾರು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಎಸ್ಪಿ ಡಾ. ಅಶ್ವಿನಿ ಹಾಗೂ ಇನ್ಸ್ಪೆಕ್ಟರ್  ಸ್ಸುಬ್ರಮಣ್ಯಂ ಸಿಬ್ಬಂದಿಯೊಂದಿಗೆ ಮಧ್ಯಾಹ್ನ ತಾಲೂಕು ಕಚೇರಿಗೆ ಆಗಮಿಸಿ ರಾತ್ರಿ 9 ಗಂಟೆಯಾದರೂ ತಪಾಸಣೆ ಕಾರ್ಯ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ದೇವನಹಳ್ಳಿಯಲ್ಲಿ ತಹಸೀಲ್ದಾರ್ಗಳಾಗಿ ಕಾರ್ಯ ನಿರ್ವಹಿಸಿದ್ದ ಮರಿಯಪ್ಪಗೌಡ, ಆಶಾ ಪರ್ವೀನ್, ಸಂಪತ್ಕುಮಾರ್ ಹಾಗೂ ಎಲ್.ಸಿ. ನಾಗರಾಜು ಇವರ ಅವಧಿಯಲ್ಲಿ ಸರ್ಕಾರಿ ಗೋಮಾಳ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿದರಲ್ಲದೆ ಪೋಡಿ ಮಾಡಿದ್ದಾರೆ ಎಂದು ಭೂಮಾಪನ ಇಲಾಖೆ ಕಳೆದ ಜೂನ್ 2 ರಂದು ವರದಿ ನೀಡಿತ್ತು ಎಂದು ಹೇಳಲಾಗಿದೆ. ಆರೋಪ ಹೊತ್ತಿರುವ ನಾಲ್ವರು ತಹಸೀಲ್ದಾರರು ತಾಲೂಕಿನ ರಾಯಸಂದ್ರ, ವಿಶ್ವನಾಥಪುರ, ಹೊಸಹಳ್ಳಿ, ಚಿಕ್ಕನಹಳ್ಳಿ, ಹೆಗ್ಗನಹಳ್ಳಿ, ಬೀರಸಂದ್ರ ಹಾಗೂ ಕೋರಮಂಗಲ ಗ್ರಾಮಗಳ ಗೋಮಾಳಗಳಾಗಿವೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement