ರಕ್ತ ಚಂದನ ವಶ: ವ್ಯಕ್ತಿ ಬಂಧನ
ಸೂಲಿಬೆಲೆ: ಅಕ್ರಮವಾಗಿ ಕಾರಿನಲ್ಲಿ ರಕ್ತ ಚಂದನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಂದಗುಡಿ ಪೊಲೀಸರು ಬಂಧಿಸಿ ಮಾಲು ಸಮೇತ ಕಾರನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.ಬಂಧಿತ ವ್ಯಕ್ತಿಯನ್ನು ಗಂಗಾಧರ್(28) ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ನಂದಗುಡಿ ಮಾರ್ಗವಾಗಿ ಬೆಂಗಳೂರು, ಚಿಂತಾಮಣಿ ರಸ್ತೆಯಲ್ಲಿ ಅಕ್ರಮವಾಗಿ ವಾಹನದಲ್ಲಿ ರಕ್ತ ಚಂದನವನ್ನು ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಪಿಐ ತಿಮ್ಮಯ್ಯ ಅವರ ನೇತೃತ್ವದಲ್ಲಿ ಪಿಎಸ್ಐ ಅನಿಲ್ಕುಮಾರ್ ಮತ್ತು ಸಿಬ್ಬಂದಿ ಕಾರು ತಡೆದು ತಪಾಸಣೆ ನಡೆಸಿದಾಗ, ಆಂಧ್ರದ ಕದರಿ ಟೌನ್ ನಿವಾಸಿ ಗಂಗಾಧರ ಆಲಿಯಾಸ್ ಗಂಗಾದ್ರಿ ಎಂಬಾತ ಸಿಕ್ಕ ಬಿದ್ದ. ಕಾರನ್ನು ಪರಿಶೀಲನೆ ಮಾಡಿದಾಗ ಕಾರಿನ ಡಿಕ್ಕಿಯಲ್ಲಿ 120 ಕೆಜಿಯಷ್ಟು ರಕ್ತ ಚಂದನ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.