ಮುಜಾಹಿದೀನ್ ಹೆಸರಲ್ಲಿ ಬೆದರಿಕೆ : ಆರೋಪಿ ಸೆರೆ
ಬೆಂಗಳೂರು: ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ (ಕೆಐಎಎಲ್)ಕ್ಕೆ ಬೆದರಿಕೆ ಇ- ಮೇಲ್ ಕಳುಹಿಸಿದ್ದ ಗುಜರಾತ್ನ ವ್ಯಕ್ತಿಯನ್ನು ಬಂಧಿಸಲಾಗಿದೆ. ಗುಜರಾತ್ನ ಬನಸ್ಕಾಂತಾ ಜಿಲ್ಲೆ ಭಾರತ- ಪಾಕಿಸ್ತಾನ ಗಡಿಯ ಭಿಲ್ಡಿ ಗ್ರಾಮದ ಪ್ರಭಾತ್ ಠಾಕೂರ್ (20) ಬಂಧಿತ ಆರೋಪಿ. ಜು. 21ರಂದು ಪ್ರಭಾತ್ ಠಾಕೂರ್ ವಿಮಾನ ಅಪಹರಿಸುವುದಾಗಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬೆದರಿಕೆ ಇ- ಮೇಲ್ ಕಳುಹಿಸಿದ್ದ. ಕೂಡಲೇ ಪ್ರಾಧಿಕಾರದ ಅಧಿಕಾರಿಗಳು ಕೆಐಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಏರ್ಪೋರ್ಟ್ನಲ್ಲಿ ಭದ್ರತೆ ಬಿಗಿಗೊಳಿಸಿ ತೀವ್ರ ತಪಾಸಣೆ ನಡೆಸಿದ್ದರು.