ಸಮರ್ಪಕವಾಗಿ ವಿದ್ಯುತ್ ಪೂರೈಸದ ಸರ್ಕಾರ; ಬಿಜೆಪಿ
ಆನೇಕಲ್ಲು: ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವುದಾಗಿ ಪ್ರಮಾಣ ಮಾಡಿ ಸಚಿವ ಸ್ಥಾನಕ್ಕೇರಿದ ಇಂದನ ಸಚಿವ ಡಿ.ಕೆ.ಶಿವಕುಮಾರ್ ವಿದ್ಯುತ್ ಪೂರೈಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದರು.
ಅವರು ತಾಲೂಕಿನ ಚಂದಾಪುರದಲ್ಲಿ ತಾಲೂಕು ಬಿಜೆಪಿ ಘಟಕ ಹಾಗೂ ರೈತ ಮೋರ್ಚಾ ವತಿಯಿಂದ ಲೋಡ್ ಶೆಡ್ಡಿಂಗ್ ವಿರುದ್ದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ರೈತರ ಅಕ್ರಮ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸಬೇಕು. ವಿದ್ಯುತ್ ಖರೀದಿಯಲ್ಲಿ ರಾಜ್ಯದಲ್ಲಿ ಆಗಿರುವ ಹಗರಣವನ್ನು ಸಿಬಿಐ ಹಸ್ತಾತರಿಸಬೇಕು ಎಂದು ಒತ್ತಾಯಿಸಿದರು. ಚಂದಾಪುರ ವೃತ್ತದ ಬಳಿ ಪ್ರತಿಭಟನೆಯ ನಂತರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ ಬಿಜೆಪಿ ಕಾರ್ಯಕರ್ತರನ್ನು ಗೇಟ್ ಬಳಿ ಪೊಲೀಸರು ತಡೆದರು. ಪ್ರತಿಭಟನಾಕಾರರಿಂದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಜಿ.ಆಂಜಿನಪ್ಪ, ಮಾಜಿ ಅಧ್ಯಕ್ಷ ಎನ್.ಬಸವರಾಜು, ಕಾರ್ಯದರ್ಶಿ ಎಂ.ರಾಮಕೃಷ್ಣ, ಜಿ.ಪಂ.ಸದಸ್ಯ ಜೆ.ನಾರಾಯಣಪ್ಪ, ಎಪಿಎಂಸಿ ಸದಸ್ಯರಾದ ಬಿ.ನಾಗರಾಜು, ಮುನಿರೆಡ್ಡಿ, ತಾ.ಪಂ.ಮಾಜಿ ಅಧ್ಯಕ್ಷರಾದ ತೇಜಸ್ವಿನಿ ನಟರಾಜ್, ಮುರಳೇಧರ್, ಓಂಕಾರ್, ಪುರಸಭೆ ಮಾಜಿ ಅಧ್ಯಕ್ಷ ಸತ್ಯೇಂದ್ರಕುಮಾರ್, ಎ. ಉದಯಕುಮಾರ್, ಬಂಡಾಪುರದ ರಾಮಚಂದ್ರಪ್ಪ, ಸೋಮಶೇಖರರೆಡ್ಡಿ, ಅಶೋಕ್, ರಘು, ಶ್ರೀಕಾಂತ್ ಹಾಜರಿದ್ದರು.