ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
ರಾಮನಗರ: ತಾಲೂಕಿನ ಶಿಶು ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮಹಿಳಾ ಅಭ್ಯರ್ಥಿಗಳು ಫೆ.28ರ ಸಂಜೆ 5ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ದ್ವಿಪ್ರತಿ ಅರ್ಜಿಯನ್ನು ಶಿಶು ಅಭಿವಣದ್ಧಿ ಯೋಜನಾಧಿಕಾರಿಗಳು, ರಾಮನಗರ ಇವರ ಕಚೇರಿಗೆ ಸಲ್ಲಿಸಬಹುದಾಗಿದೆ.
ಗೋಪಳ್ಳಿ ಗ್ರಾ.ಪಂ.ನ ಪರವೇಗೌಡನಪಾಳ್ಯ, ರಾಮನಗರ ನಗರಸಭೆಯ ವಾರ್ಡ್ ನಂ.27 ಈ ಎರಡು ಕಡೆ ಹುದ್ದೆ ಖಾಲಿ ಇದೆ. ಅಭ್ಯರ್ಥಿ 18 ರಿಂದ 44 ವಯೋವುತಿಯಲ್ಲಿರಬೇಕು. ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಇಲಾಖೆ, ದೂರವಾಣಿ: 27273912 ಸಂಪರ್ಕಿಸುವುದು.