ಅಖಂಡ ಭಜನಾ ಶಾಂತಿ ಸಪ್ತಾಹಕ್ಕೆ ಸಂಭ್ರಮದ ತೆರೆ
ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಲಿ ನೇತೃತ್ವದಲ್ಲಿ ಶ್ರೀರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯದಲ್ಲಿ 7 ದಿನಗಳ ಕಾಲ ನಿರಂತರವಾಗಿ ನಡೆದ ಅಖಂಡ ಭಜನಾ ಶಾಂತಿ ಸಪ್ತಾಹಕ್ಕೆ ಗುರುವಾರ ಬೆಳಗ್ಗೆ ತೆರೆಬಿತ್ತು. 12 ವಿವಿಧ ಭಜನಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ವೇಷಭೂಷಣ: ಬುಧವಾರ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ವಿಶೇಷ ವೇಷಭೂಷಣಗಳನ್ನು ಧರಿಸಿ ಭಜನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವೇಷಭೂಷಣ ನೋಡಲೆಂದೇ ನೂರಾರು ಜನ ಸೇರಿದ್ದರು. ಸಪ್ತಾಹದ ಕೊನೆಯ ದಿನದ ಅಂಗವಾಗಿ ಗುರುವಾರ ಶ್ರೀಮಾತೆಯ ರಾಜಬೀದಿ ಉತ್ಸವ ನಡೆಯಿತು. ದೇವಾಂಗ ಮಂಡಲಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.