ಅನ್ನಭಾಗ್ಯ ಯೋಜನೆ ಹುಲ್ಲೂರು ಚಾಲನೆ
ರಾಮನಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಪಡಿತರ ಖಾತ್ರಿ ನಿಮ್ಮ ಹಕ್ಕು ಮತ್ತು ಅನ್ನಭಾಗ್ಯ ಯೋಜನೆಡಿ ರು.1ಕ್ಕೆ 1 ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ನಗರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಂ.ಎಂ.ಹುಲ್ಲೂರು ಚಾಲನೆ ನೀಡಿದರು. ನಗರದ 9ನೇ ವಾರ್ಡಿನ ನ್ಯಾಯಬೆಲೆ ಅಂಗಡಿಯಲ್ಲಿ ರು.1ಕ್ಕೆ 1 ಕೆಜಿ ಅಕ್ಕಿ ತೂಕ ಮಾಡಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಪ್ರತಿ ತಿಂಗಳು 1 ರಿಂದ 10 ನೇ ತಾರೀಖಿನವರೆಗೆ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಪಡಿತರ ವಿತರಣೆ ಕಡ್ಡಾಯ ಎಂದು ತಾಕೀತು ಮಾಡಿದರು. ಪಡಿತರ ಆಹಾರ ದುರ್ಬಳಕೆ, ಸಕಾಲಕ್ಕೆ ವಿತರಣೆ ಆಗದ ಬಗ್ಗೆ ದೂರುಗಳು ಬಂದಲ್ಲಿ ತಕ್ಷಣ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಹೀಗಾಗಿ ನ್ಯಾಯಬೆಲೆ ಅಂಗಡಿಯವರು, ಅಧೀನ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.