ಕನಸವಾಡಿ ಕಾಲೇಜಿನಲ್ಲಿ ಸರ್ವೋದಯ ದಿನಾಚರಣೆ
ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮ ಗುರುವಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ರಾಜಶೇಖರಯ್ಯ ಮಾತನಾಡಿ ಹಲವು ಅಸಮಾನತೆಗಳ ಗೂಡಾಗಿರುವ ಭಾರತದ ಪ್ರಗತಿಗೆ ಗಾಂಧಿ ಕಂಡ ಸರ್ವೋದಯ ಮಂತ್ರ ಪರಿಹಾರವಾಗಬಲ್ಲುದು. ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ ಹಲವು ಅಕ್ರಮಗಳಿಗೆ ಕಾರಣವಾಗಿದ್ದು, ಅದು ಸಂಪೂರ್ಣ ನಿಲ್ಲಬೇಕು. ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದರು. ಕಾಲೇಜು ಆವರಣ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಕೆ. ಹನುಮೇಗೌಡ, ವೃಂದಮ್ಮ, ಮಂಜುಳಾ, ಶ್ರೀನಿವಾಸ್, ಉಪೇಂದ್ರ, ರಾಜಶ್ರೀ ಮತ್ತಿತರರು ಭಾಗವಹಿಸಿದ್ದರು.