ಬಿ.ಇಡಿ. ದಾಖಲಾತಿಗೆ ಸೂಚನೆ
ರಾಮನಗರ: 2013-14ನೇ ಸಾಲಿನ ಬಿ.ಇಡಿ. ಕೋರ್ಸಿಗೆ ಪ್ರಥಮ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಲ್ಲಿ ದಾಖಲಾಗದೆ, ಸಂಸ್ಥೆ ಬದಲಾವಣೆ ಬಯಸಿದ ಹಾಗೂ ಎರಡು ಸ್ಟಾರ್ ಚಿಹ್ನೆ ಹೊಂದಿರುವ ಅಭ್ಯರ್ಥಿಗಳಿಗೆ 2ನೇ ಆಯ್ಕೆ ಪಟ್ಟಿಯನ್ನು ಶಿಕ್ಷಣಾ ಇಲಾಖೆಯ ವೆಬ್ಸೈಟ್ ಹಾಗೂ ನೋಡಲ್ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಸಂಬಂಧಿಸಿದ ನೋಡಲ್ ಕೇಂದ್ರದಲ್ಲಿ ಪರಿಶೀಲನೆಗೆ ಒಳಪಡಿಸಿದ್ದು, ನಿಗದಿತ ಶುಲ್ಕವನ್ನು ಪಾವತಿಸಿ ಹಂಚಿಕೆ ಮಾಡಲಾಗಿರುವ ಸಂಸ್ಥೆಗಳಿಗೆ ದಾಖಲಾಗಲು ಜಿಲ್ಲಾ ಡಯಟ್ ಉಪ ನಿರ್ದೇಶಕರು(ಅಭಿವೃದ್ಧಿ) ಸೂಚಿಸಿರುತ್ತಾರೆ.
ವ್ಯವಸ್ಥಾಪಕ ಕೇಂದ್ರದಲ್ಲಿ ದಾಖಲಾತಿ ಪ್ರಕ್ರಿಯೆ ಮುಗಿದ ನಂತರ ಅವಶ್ಯಕತೆ ಬಿದ್ದಲ್ಲಿ ಹಾಗೂ ಖಾಲಿ ಸೀಟುಗಳು ಉಳಿದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ರ್ಯಾಂಕ್ ಆಧಾರದ ಮೇಲೆ ಕೌನ್ಸೆಲಿಂಗ್ ನಡೆಸಲಾಗುವುದು. ಕೌನ್ಸೆಲಿಂಗ್ ವೇಳಾ ಪಟ್ಟಿಯನ್ನು ಶೀಘ್ರ ತಿಳಿಸಲಾಗುವುದು ಎಂದಿದ್ದಾರೆ.